ಕಾರವಾರ: ಸದಾಶಿವಗಡದ ರಿದಂ ಹಾರ್ಟ್ ಬೀಟ್ಸ್ ಮತ್ತು ಡ್ಯಾನ್ಸ್ ಇನ್ಸ್ಟಿಟ್ಯೂಟ್ ಮಕ್ಕಳಿಗಾಗಿ ನಡೆಸುತ್ತಿರುವ ಬೇಸಿಗೆ ಶಿಬಿರವನ್ನು ಶುಕ್ರವಾರ ಬೆಳಿಗ್ಗೆ ನಗರದ ಎಂ.ಜಿ.ರಸ್ತೆಯಲ್ಲಿರುವ ಮಹಿಳಾ ಮಂಡಳದ ಕಚೇರಿಯಲ್ಲಿ ಉದ್ಘಾಟನೆ ಮಾಡಲಾಯಿತು.
ಉದ್ಘಾಟಕರಾಗಿ ಆಗಮಿಸಿದ್ದ ನಗರದ ಹಿಂದೂ ಪ್ರೌಢಶಾಲೆಯ ನಿವೃತ್ತ ಮುಖ್ಯೋಧ್ಯಾಪಕ ಹಾಗೂ ಸದಾಶಿವಗಡ ಪ್ರೌಢಶಾಲಾ ಸಮಿತಿಯ ಮಾಜಿ ಅಧ್ಯಕ್ಷ ಶಾಂತಾರಾಮ ಕುಲಕರ್ಣಿ ಮಾತನಾಡಿ, ಇಂತಹ ಶಿಬಿರದ ಪ್ರಯೋಜನವನ್ನು ಎಲ್ಲ ಮಕ್ಕಳೂ ಪಡೆದುಕೊಳ್ಳುವಲ್ಲಿ ಅವರ ಪಾಲಕರು ಶ್ರಮವಹಿಸಬೇಕು ಎಂದು ತಿಳಿಸಿದರು.
‘ಕೊಂಕಣ ವಾಹಿನಿ’ ದಿನಪತ್ರಿಕೆಯ ಸಂಪಾದಕ ದೀಪಕಕುಮಾರ, ರಿದಮ್ ಹಾಟ್ರ್ಬೀಟ್ ಸಂಸ್ಥೆಯ ಸಂಸ್ಥಾಪಕರಾದ ವಿಜಯೇಂದ್ರ ಕುಮಾರ್ ಹಾಗೂ ಪೂನಂ ಅವರು ಬೇಸಿಗೆ ಶಿಬಿರದ ಆಯೋಜಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಮೊಬೈಲ್‍ನಲ್ಲಿಯೇ ತಲ್ಲೀನರಾಗಿರುವ ಮಕ್ಕಳು ಇಂದು ಆಟೋಟಗಳಿಂದ ದೂರವೇ ಇರುತ್ತಿದ್ದಾರೆ. ಇದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇಂತಹ ಶಿಬಿರಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತವೆ ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಉμÁ ಹಳದೀಪುರ, ಮಕ್ಕಳನ್ನು ಮೊಬೈಲ್ ನಿಂದ ದೂರವಿಟ್ಟು ಅವರಿಗೆ ಹೆಚ್ಚು ಹೆಚ್ಚು ಮಾನಸಿಕ ಹಾಗೂ ದೈಹಿಕ ಕಸರತ್ತು ನೀಡುವ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿವಾಜಿ ಕಾಲೇಜಿನ ಶಿಕ್ಷಕ ಗಣೇಶ ಬಿಷ್ಟಣ್ಣನವರ, ಕಳೆದ 7 ವರ್ಷಗಳಿಂದ ಈ ಸಂಸ್ಥೆ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಾ ಬಂದಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಸಂಸ್ಥೆಯು ಇಂತಹ ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡು ಮಕ್ಕಳ ಬೆಳವಣಿಗೆಗೆ ಶ್ರಮಿಸಲಿ ಎಂದು ಹಾರೈಸಿದರು.
ಸಂಸ್ಥೆಯ ಸದಸ್ಯರಾದ ಸುನಂದಾ ಪ್ರಸಾದ ಅವರು ಹಾಜರಿದ್ದರು. ವಸಂತ ಬಾಂದೇಕರ ಕಾರ್ಯಕ್ರಮವನ್ನು ನಿರೂಪಿಸಿದರು. ಮಾಜಳಿ ಪ್ರೌಢಶಾಲೆಯ ಶಿಕ್ಷಕ ವಿಕಾಸ್ ಕೊಠಾರಕರ ಸ್ವಾಗತಿಸಿದರು. ಪೂನಂ ಕುಮಾರೇಶ, ಎಲ್ಲರೂ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ಕೋರಿದರು.