ಶಿರಸಿ: ಕೊರೋನಾ ಸಮಯದಲ್ಲಿ ಆನ್ಲೈನ್ ವೇದಿಕೆಗಳು ರಚನೆಯಾಗಿ ಎಲೆಮರೆಯ ಕಾಯಿಗಳಂತಿದ್ದ ಹಲವಾರು ಬರಹಗಾರರನ್ನು ಬೆಳಕಿಗೆ ತಂದಿವೆ. ಇಂಥಹ ಸಂಘಟನೆಗಳು ಇನ್ನಷ್ಟು ಬೆಳವಣಿಗೆ ಹೊಂದಿ ಬರಹಗಾರರನ್ನು ಬೆಳೆಸಲಿ ಎಂದು ಹಿರಿಯ ಕವಯತ್ರಿ ಭಾಗೀರಥಿ ಹೆಗಡೆ ಹೇಳಿದರು.
ಅವರು ನಗರದ ನೆಮ್ಮದಿ ಕುಟೀರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಶಿರಸಿ ಘಟಕದ ಪದಗ್ರಹಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಎಂಬುದು ರಿಜಿಸ್ಟ್ರ್ ಸಂಸ್ಥೆಯಾಗಿದ್ದು ಇದು ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಎತ್ತರಕ್ಕೆತ್ತರಕ್ಕೇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಲೀಲಾ ರವರು ಕೃತಿಚೌರ್ಯ ಮಾಡದೇ ನಮ್ಮದೇ ಆದ ಸ್ವಂತ ಬರಹ ಬರೆಯೋಣ. ಕನ್ನಡ ಭಾಷೆಗೆ ದುಡಿಯೋಣ,ಕನ್ನಡದ ಸೇವೆ ಮಾಡೋಣ, ಸಾಹಿತ್ಯದ ಸೇವೆ ಮಾಡೋಣ, ನಾವೂ ಬೆಳೆಯೋಣ ನಮ್ಮವರನ್ನೂ ಬೆಳೆಸೋಣ ಎಂದರು.
ಶಿವಲೀಲಾ ಹುಣಸಗಿ, ಭಾಗೀರಥಿ ಹೆಗಡೆ, ಜಿ.ಎ.ಹೆಗಡೆ ಸೋಂದಾ, ದತ್ತಗುರು ಕಂಠಿ, ಡಿ.ಎಸ್.ನಾಯ್ಕ, ಕೆ.ಮಹೇಶ್, ಕೃಷ್ಣ ಪದಕಿ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇವರೆಲ್ಲರ ಸಮ್ಮುಖದಲ್ಲಿ ಎಲ್ಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಂಭ್ರಮದಿಂದ ನೆರವೇರಿತು. ಕೃಷ್ಣ ಪದಕಿ, ಗಣಪತಿ ಭಟ್ಟ, ಸಾವಿತ್ರಿ ಶಾಸ್ತ್ರಿ, ಮಹೇಶ್ ಕುಮಾರ್ ಹನಕೆರೆ, ರಾಜು ಉಗ್ರಾಣಕರ್, ಪ್ರತಿಭಾ ನಾಯ್ಕ, ಜಗದೀಶ್ ಭಂಡಾರಿ, ಯಶಸ್ವಿನಿ ಶ್ರೀಧರಮೂರ್ತಿ, ದಿನೇಶ್ ಅಮ್ಮಿನಳ್ಳಿ, ರೇವತಿ ಭಟ್ಟ, ಭವ್ಯಾ ಹಳೆಯೂರು, ನಾಗವೇಣಿ ವೆಂ.ಹೆಗಡೆ ಇವರುಗಳು ಪದಾಧಿಕಾರಿಗಳಾಗಿ ವಿವಿಧ ಪದವಿ ಸ್ವೀಕರಿಸಿದರು.
ಬೇರೆ ಬೇರೆ ಕ್ಷೇತ್ರಗಳ ಸಾಧಕರಾದ ಶೈಲಜಾ ಮಂಗಳೂರು, ಸೂರಜ್ ರಾಣಿ ಎಂ.ಪ್ರಭು, ಚಂದ್ರು ಉಡುಪಿ, ರತ್ನಾಕರ್ ಭಟ್ಟ ಕಾನ್ಸೂರು, ಶಿವಲೀಲಾ ಹುಣಸಗಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾನ್ಯ ಹೆಗಡೆ ಪ್ರಾರ್ಥನೆ ನಡೆಸಿಕೊಟ್ಟರೆ, ಪುಷ್ಪಾ ಮಾಳಕೊಪ್ಪ ಸುಶ್ರಾವ್ಯವಾಗಿ ಕನ್ನಡಗೀತೆ ಹಾಡಿದರು.ಯಶಸ್ವಿನಿ ಶ್ರೀಧರ ಮೂರ್ತಿಯವರು ಅತಿಥಿಗಳ ಸ್ವಾಗತ ಪರಿಚಯ ಮಾಡಿದರು. ಭವ್ಯ ಹಳೇಯೂರು ನಿರೂಪಿಸಿದರು.ದಿನೇಶ್ ಅಮ್ಮೀನಳ್ಳಿ ವಂದನಾರ್ಪಣೆ ಮಾಡಿದರು.
ಗಣಪತಿ ಭಟ್ ವರ್ಗಾಸರ, ಎಂ.ಡಿ ಭಟ್ ಕುಳವೆ, ಮಹೇಶಕುಮಾರ್ ಹನಕೆರೆ, ಸಾವಿತ್ರಿ ಶಾಸ್ತ್ರಿ ಇವರುಗಳು ನಿರ್ಣಾಯಕರಾಗಿ ಕವಿಗೋಷ್ಠಿಯ ವೇದಿಕೆ ಸಿಂಗರಿಸಿದ್ದರು.
ಕವಿಗೋಷ್ಠಿ ಕಾರ್ಯಕ್ರಮವನ್ನು ರಾಜು ಉಗ್ರಾಣಕರ್ ನಿರೂಪಿಸಿದರೆ, ಜಗದೀಶ್ ಭಂಡಾರಿ ಸ್ವಾಗತಿಸಿದರು.ಹಲವಾರು ಕವಿಗಳು ಭಾಗವಹಿಸಿ ಕವನ ವಾಚನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.