ದಾಂಡೇಲಿ: ಗಣೇಶ ಗುಡಿಯ ಇಳವಾದಲ್ಲಿ ಏ.14ರಂದು ಕಾಳಿನದಿ ರಾಫ್ಟಿಂಗ್ ಮಾಡುವ ವೇಳೆಯಲ್ಲಿ ಒಂದು ಬೋಟಿನಲ್ಲಿ ನಿಗದಿತ ಜನರಿಗಿಂತ ಹೆಚ್ಚಿನ ಜನರನ್ನು ಕೂರಿಸಿಕೊಂಡು ರಾಫ್ಟಿಂಗ್ ಮಾಡುತ್ತಿದ್ದಾಗ ಬಂಡೆಗಲ್ಲಿಗೆ ಸಿಲುಕಿದ್ದು ಜೀವ ಹಾನಿಯಾಗುವ ಸಂಭವ ಎದುರಾಗಿತ್ತು.ಆ ಸಂದರ್ಭದಲ್ಲಿ ಇತರೆ ಬೋಟ್ ಮ್ಯಾನರ್ ಗಳು ಬಂದು ಅವರನ್ನು ರಕ್ಷಿಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ಜೋಯಿಡಾದ ಸಿಪಿಐ ದಯಾನಂದ್ ಶೇಗುಣಸಿ ಏ.15ರಂದು ಬೆಳಿಗ್ಗೆ ರಾಮನಗರ ಠಾಣೆಯ ಪಿಎಸ್ಐ ವಿನೋದ ಎಸ್.ಕೆ. ಹಾಗೂ ಸಿಬ್ಬಂದಿಗಳೊಂದಿಗೆ ಇಳವಾದಲ್ಲಿರುವ ವಾಟರ್ ಆಕ್ಟಿವಿಟೀಸ್ ನಡೆಸುವ ಸ್ಥಳಕ್ಕೆ ದಿಡೀರ್ ಭೇಟಿ ನೀಡಿರುತ್ತಾರೆ.
ವಾಟರ್ ಆಕ್ಟಿವಿಟೀಸ್ ನಡೆಸುವ ಮಾಲೀಕರ ಹಾಗೂ ಸ್ಥಳದ ಬಗ್ಗೆ ಹಾಗೂ ಬೋಟ್, ಕೈಕಿಂಗ್ ಗೆ ಸಂಬಂಧಿಸಿದ ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿ, ಅನುಮತಿ ಪಡೆಯದ ಬೋಟ್ ಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ಪ್ರತಿಯೊಂದು ವಾಟರ್ ಆಕ್ಟಿವಿಟೀಸ್ ನಡೆಸುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಇರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದಾರೆ.
ತದನಂತರ ಜೋಯ್ಡಾ ಆರ್.ಎಫ್.ಓ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು,ಗ್ರಾಮ ಪಂಚಾಯತ್ ಅಧ್ಯಕ್ಷರು, ಇಲಾಖೆ ಅಧಿಕಾರಿಗಳು, ಸೂಪಾ ಡ್ಯಾಂನ ಕೆಪಿಸಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಾಟರ್ ಆಕ್ಟಿವಿಟೀಸ್ ನಡೆಸುವವರ ಮೇಲೆ ನಿಗಾ ಇಡುವುದು ಹಾಗೂ ಪ್ರವಾಸಿಗರ ಸುರಕ್ಷತೆಯ ಕ್ರಮಗಳ ಪರಿಪಾಲನೆ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು