ಶಿರಸಿ: ಅಜಿತ ಮನೊಚೇತನಾ ವಿಕಾಸ ವಿಶೇಷ ಮಕ್ಕಳ ಶಾಲೆಗೆ ಶಾಲಾವಾಹನ ಖರೀದಿಸಲು 20,ಲಕ್ಷ ರೂ. ದೇಣಿಗೆಯನ್ನು ಪುಣೆಯ ದೀವಗಿ ಟಾರ್ಕ್ ಟ್ರಾನ್ಸಫರ್ ಸಿಸ್ಟೆಮ್ ಲಿಮಿಟೆಡ್ ಸಂಸ್ಥೆ ನೀಡಿದೆ.
ಏ.15ರಂದು ಬೆಳಿಗ್ಗೆ ಅಜಿತ ಮನೋಚೇತನ ಸಂಸ್ಥೆಗೆ ಪುಣೆಯ ದೀವಗಿ ಉದ್ದಿಮೆಯ ಹಿರಿಯ ಅಧಿಕಾರಿ ಶ್ರೀಮತಿ ಜ್ಯೋತಿ ದೀವಗಿ, ಭರತ್ ದೀವಗಿ, ರಾಮಕೃಷ್ಣ ತಲವಾರ ತಂಡ ಭೇಟಿ ನೀಡಿತು.ಸಮಾಜಕ್ಕೆ ಅಜಿತ ಮನೋಚೇತನ ಸಂಸ್ಥೆ ನೀಡುತ್ತಿರುವ ಮಾನವೀಯ ಸೇವೆಯನ್ನು ಜ್ಯೋತಿ ದೀವಗಿ ಶ್ಲಾಘಿಸಿದರು.
ಅಜಿತ ಮನೋಚೇತನದ ಪ್ರಮುಖರಾದ ಸುಧೀರ ಭಟ್, ಅನಂತ ಹೆಗಡೆ ಅಶೀಸರ, ಉದಯ ಸ್ವಾದಿ ಅವರು ದೀವಗಿ ಉದ್ದಿಮೆಯವರು ನೀಡಿದ ಚೆಕ್ ನ್ನು ಸ್ವೀಕರಿಸಿದರು.ಸಂಸ್ಥೆಗೆ ಅವಶ್ಯವಾದ ಶಾಲಾ ವಾಹನವನ್ನು ಖರೀದಿಸಲು ದೀವಗಿಯವರ ಸಿ.ಎಸ್.ಆರ್ ದೇಣಿಗೆ ಬಹಳ ಉಪಯುಕ್ತವಾಗಿದೆ ಎಂದು ಸುಧೀರ್ ಭಟ್ ಕೃತಜ್ಞತೆ ಹೇಳಿದರು.
ಶಿರಸಿ ಅರ್ಬನ ಬ್ಯಾಂಕ್ ಅಧ್ಯಕ್ಷ ಜಯದೇವ ನೀಲೆಕಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖ್ಯ ಅಧ್ಯಾಪಕಿ ನರ್ಮದ ಅವರು ಧನ್ಯವಾದ ಹೇಳಿದರು.