ಶಿರಸಿ: “ಹಿಂದೂಸ್ತಾನಿ ಸಂಗೀತದಲ್ಲಿ ಸಂಕೀರ್ಣ ರಾಗಗಳು: ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದ ಮೇಲೆ ತಾಲೂಕಿನ ಹೆಗ್ಗರ್ಸಿಮನೆಯ ಸಂಧ್ಯಾ ಭಟ್ ಅವರ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಈತ್ತೀಚೆಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ. ಜಯದೇವಿ ಜಂಗಮಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡನೆ ಮಾಡಿರುವ ಸಂಧ್ಯಾ ಭಟ್ಟ ಹೆಗ್ಗರ್ಸಿಮನೆಯ ಸತ್ಯನಾರಾಯಣ ಹಾಗೂ ದಾಕ್ಷಾಯಿಣಿ ಭಟ್ ದಂಪತಿಗಳ ಪುತ್ರಿಯಾಗಿದ್ದಾಳೆ