• first
  second
  third
  Slide
  previous arrow
  next arrow
 • ಪ್ರೊಗ್ರೆಸ್ಸಿವ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ

  300x250 AD

  ಶಿರಸಿ: ಶಿರಸಿ ನಾಮಧಾರಿ, ಬಿಲ್ಲವ, ಆರ್ಯ, ಈಡಿಗ ಸಮಾಜದ ಯುವಕರ ಸಂಘವು ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಶಿರಸಿಯ ಗಾಂಧಿನಗರದ ಪ್ರೋಗ್ರೆಸ್ಸಿವ್ ಮೈದಾನದಲ್ಲಿ ಏ. 16 ಮತ್ತು 17ರಂದು ನಡೆಸಲು ನಿಶ್ಚಯಿಸಿದೆ.

  ಪ್ರತಿವರ್ಷದಂತೆ ಈ ವರ್ಷವೂ ನಡೆಯುವ ಎರಡು ದಿನದ ಪಂದ್ಯಾವಳಿಗೆ ಪ್ರಥಮ ಬಹುಮಾನವಾಗಿ ₹ 30000 ಮತ್ತು ದ್ವಿತೀಯ ಬಹುಮಾನವಾಗಿ 20000 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಪಂದ್ಯಾವಳಿಗೆ ಜಿಲ್ಲೆಯ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು ಸಮಾಜದ ಹೆಸರಾಂತ ಆಟಗಾರರು ಭಾಗವಹಿಸಲಿದ್ದಾರೆ.

  ಕಾರ್ಯಕ್ರಮವನ್ನು ಏ. 16 ಬೆಳಿಗ್ಗೆ 11.30 ಕ್ಕೆ ಸಮಾಜದ ಮುಖಂಡರಾದ ಭೀಮಣ್ಣ ನಾಯಕ್ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಶಿರಸಿಯ ನಗರಸಭೆಯ ಅಧ್ಯಕ್ಷರಾದ ಗಣಪತಿ ಎಲ್ ನಾಯ್ಕ್ ವಹಿಸಲಿದ್ದಾರೆ.

  300x250 AD

  ಹಾಗೆಯೇ ಮುಖ್ಯಅತಿಥಿಗಳಾಗಿ ಉಪವಿಭಾಗಾಧಿಕಾರಿಗಳಾದ ದೇವರಾಜ್ ಆರ್, ಪೊಲೀಸ್ ಇಲಾಖೆಯ ಡಿವೈಎಸ್ಪಿ ರವಿ ಡಿ ನಾಯ್ಕ, ಸಾರಿಗೆ ಅಧಿಕಾರಿಗಳಾದ ಸಿ.ಡಿ.ನಾಯ್ಕ್, ಸ್ಕೊಡ್ ವೇಸ್ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ನಾಯ್ಕ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಆರ್.ಜಿ.ನಾಯ್ಕ್,ಶಿರಸಿ ತಾಲೂಕಾ ಆರ್ಯ ಈಡಿಗ ಸಮಾಜದ ಅಭಿವೃದ್ಧಿ ಸಂಘದ ನಗರ ಘಟಕ ಅಧ್ಯಕ್ಷ ಗಣಪತಿ ನಾಯ್ಕ, ಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಮಂಗಲಾ ನಾಯ್ಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಭಾಷ್ ನಾಯಕ ಹಾಗೂ ಸಮಾಜದ ಇತರ ಗಣ್ಯರು, ಹಿರಿಯರು ಭಾಗವಹಿಸಲಿದ್ದಾರೆ.

  ಪಂದ್ಯಾವಳಿಯ ಸಮಾರೋಪ ಸಮಾರಂಭವು ಏ. 27 ರವಿವಾರ ಸಂಜೆ 5.30ಕ್ಕೆ ನೆರವೇರಲಿದ್ದು ವಿಜೇತರಿಗೆ ಹಾಗೂ ರನ್ನರ್ ಅಪ್ ತಂಡಕ್ಕೆ ಬಹುಮಾನ ವಿತರಿಸಲಾಗುವುದು ಎಂದು ಸಂಘಟಕರ ಪರವಾಗಿ ಪಾಂಡು ನಾಯಕ, ರಾಘವೇಂದ್ರ ನಾಯಕ್ ಹಾಗೂ ಇತರರು ತಿಳಿಸಿದ್ದಾರೆ

  Share This
  300x250 AD
  300x250 AD
  300x250 AD
  Back to top