ಅಂಕೋಲಾ: ಗ್ರಾಮೀಣ ಭಾಗದವರ, ಬಡವರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪೋನ್ ಮೂಲಕ ಮನೆ ಬಾಗಿಲಿಗೆ ಪೆನ್ಷನ್ ಯೋಜನೆಯನ್ನು ಸದ್ಯದಲ್ಲಿಯೇ ಉದ್ಘಾಟಿಸಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತದ ಕುಂಟಗಣಿಯಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಹಾಗು ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಜನರು ತಮ್ಮ ದಾಖಲೆಗಾಗಿ ಕಂದಾಯ ಇಲಾಖೆಗೆ, ಅಧಿಕಾರಿಗಳ ಬಳಿಗೆ ಹೋಗುತ್ತಿದ್ದರು. ಅದು ಬದಲಾಗಬೇಕು. ಜನರ ಮನೆ ಬಾಗಿಲಿಗೆ ಅಧಿಕಾರಿ ಬರಬೇಕೆನ್ನುವ ದೃಷ್ಟಿಯಿಂದ ಅಧಿಕಾರಿಗಳ ನಡೆ ಹಳ್ಳಿ ಕಡೆ ಯೋಜನೆಯನ್ನು ಆಯೋಜಿಸಲಾಗಿದೆ. ಜನರಿಗೆ ನೀಡಬೇಕಾದ ಸವಲತ್ತುಗಳನ್ನು ನೀಡುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಮನೆ ಬಾಗಿಲಿಗೆ ಪೆನ್ಷನ್, ಗ್ರಾಮ ಒನ್ ಯೋಜನೆ ಮೂಲಕ ಬಡವರ ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದರು.
ಈ ವೇಳೆ ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಶಾಸಕ ದಿನಕರ ಶೆಟ್ಟಿ, ಶಾಸಕ ಶಾಂತಾರಾಮ ಸಿದ್ದಿ ಇದ್ದರು. ಗಣ್ಯರನ್ನು ತಳಿರು-ತೋರಣದಿಂದ ಅಲಂಕರಿಸಿದ್ದ ಟ್ರ್ಯಾಕ್ಟರ್ ಮುಖಾಂತರ ಮೆರವಣಿಗೆ ನಡೆಸಲಾಯಿತು.