ಸಿದ್ದಾಪುರ: ತಾಲೂಕಿನ ಇಟಗಿ ಕಲಗದ್ದೆಯಲ್ಲಿನ ಶ್ರೀನಾಟ್ಯ ವಿನಾಯಕ ದೇವಸ್ಥಾನದ ಆವಾರದಲ್ಲಿ ಇದೇ ಪ್ರಥಮ ಬಾರಿಗೆ ಶ್ರೀ ವಿನಾಯಕ ಕಲ್ಯಾಣ ಲೀಲೋತ್ಸವವನ್ನು ಏ.16 ಹಾಗೂ 17 ರಂದು ನಡೆಸಲಾಗುತ್ತಿದೆ ಎಂದು ನಾಟ್ಯ ವಿನಾಯಕ ಕಲ್ಯಾಣ ಲೀಲೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ, ಕಾರ್ಯಾಧ್ಯಕ್ಷ ಶಶಿಕುಮಾರ ತಿಮ್ಮಯ್ಯ ಹಾಗೂ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ತಿಳಿಸಿದ್ದಾರೆ.
ಲೋಕದ ಕಲ್ಯಾಣಾರ್ಥ ಹಾಗೂ ವಿಶ್ವದ ಶಾಂತಿಗೆ ನಡೆಸಲಾಗುವ ಈ ಕಲ್ಯಾಣ ಲೀಲೋತ್ಸವ ಏ.16ರಿಂದ ಆರಂಭವಾಗಲಿದೆ. ಅಂದು ಮುಂಜಾನೆ ಗಣೇಶ ಪ್ರಾರ್ಥನೆ, ದೇವ ನಾಂದಿಗಳ ಜೊತೆ ಗಣೇಶ ಯಾಗ, ಮುಂಜಾನೆ 9 ರಿಂದ ಸುತ್ತಲಿನ ಹತ್ತು ಹಳ್ಳಿಗಳಿಗೆ ಶ್ರೀದೇವರ ದಿಗ್ವಿಜಯ ಮೆರವಣಿಗೆ, ಸಂಜೆ 6ಕ್ಕೆ ಶ್ರೀದೇವರ ಪುರ ಪ್ರವೇಶ, ರಾಜೋಪಚಾರ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
17 ರಂದು ಶ್ರೀ ನಾಟ್ಯ ವಿನಾಯಕ ದೇವರ ಸನ್ನಿಧಿಯಲ್ಲಿ ಗಣ ಹವನ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು, ಮಾತೆಯರಿಂದ ಮೋದಕ ಸಮರ್ಪಣೆ, ಮಹಾ ಮಂಗಳಾರತಿ, ಪ್ರಸಾದ ಭೋಜನ, ಮಧ್ಯಾಹ್ನ 3ಕ್ಕೆ ಶ್ರೀದೇವರ ದೇವರ ವೈಭವದ ದಿಬ್ಬಣಕ್ಕೆ ಪೂರ್ಣಕುಂಭ ಸ್ವಾಗತ, ಸಂಜೆ 5ಕ್ಕೆ ಸಭಾ ಪೂಜೆ, ಸಿದ್ದಿಬುದ್ದಿಯರೊಂದಿಗೆ ಮಹಾಗಣಪತಿ ಕಲ್ಯಾಣೋತ್ಸವ, ಮಹಾ ದರ್ಬಾರ ಪ್ರವೇಶ, ಶ್ರೀದೇವರಿಗೆ ಸುವಸ್ತುಗಳ ಕಪ್ಪ ಕಾಣಿಕೆಗಳ ಅರ್ಪಣೆ, ಕನಕಾಭಿಷೇಕ, ರಾಜೋಪಚಾರ ಸೇವೆ, ರಥೋತ್ಸವ, ಡೋಲಾ ಯಂತ್ರೋತ್ಸವದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ತೊಟ್ಟಿಲಲ್ಲಿ ಶ್ರೀಮಹಾಗಣಪತಿ ದೇವರನ್ನು ಸಿದ್ದಿ ಬುದ್ದಿ ಸಹಿತ ಇಟ್ಟು ತೂಗುವ ಸೇವೆ ನಡೆಯಲಿದೆ. ವೇದ ಘೋಷ, ನೃತ್ಯ ಸೇವೆ, ವಾದ್ಯ ಗೋಷ್ಟಿ, ಮಹಾಮಂಗಳಾರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
17ರಂದು ಮಧ್ಯಾಹ್ನ 3ಕ್ಕೆ ಧರ್ಮಸಭೆ ನಡೆಯಲಿದ್ದು, ದಿವ್ಯ ಸಾನ್ನಿಧ್ಯವನ್ನು ಸೋಂದಾ ಸುಧಾಪುರ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ನೀಡಲಿದ್ದಾರೆ. ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಸುನೀಲ ನಾಯ್ಕ , ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ, ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಹಿರಿಯ ವಕೀಲ ಉದಯ ದೇಸಾಯಿ ಧಾರವಾಡ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಾಮಾಜಿಕ ಮುಂದಾಳು ಡಾ. ಶಶಿಭೂಷಣ ಹೆಗಡೆ ಪಾಲ್ಗೊಳ್ಳುವರು.
ವೀರರಾಜ ಜೈನ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಉಪೇಂದ್ರ ಪೈ, ವಿ.ಕಮಲಾಕರ ಭಟ್ಟ, ಸತೀಶ ಹೆಗಡೆ ಶಿರಸಿ, ದೀಪಕ ದೊಡ್ಡೂರು, ಮೋಹನಕುಮಾರ ಜೈನ್, ವೆಂಕಟೇಶ ನಾಯ್ಕ, ವಿ.ಎಂ.ಭಟ್ಟ, ಪ್ರದೀಪ ಬಾಳೆಗದ್ದೆ, ಕೃಷ್ಣಮೂರ್ತಿ ಬೆಳಗಲ್ಲೂರು, ರಮೇಶ ಹೆಗಡೆ ಕೊಡ್ತಗಣಿ ಇತರರು ಗೌರವ ಉಪಸ್ಥಿತರಿರಲಿದ್ದಾರೆ.
ಇದೇ ವೇಳೆ ಶ್ರೀ ವಿನಾಯಕ ಲೀಲೆ ವಿಶೇಷ ಉಪನ್ಯಾಸವನ್ನು ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ನೀಡಲಿದ್ದಾರೆ.
ಭಕ್ತಾದಿಗಳು ಅಪರೂಪಕ್ಕೆ ನಡೆಯುವ ಕಲ್ಯಾಣ ಲೀಲೋತ್ಸವದಲ್ಲಿ ಭಾಗಿಯಾಗಿ ಶ್ರೀದೇವರ ಕೃಪೆಗೆ ಪಾತ್ರರಾಗಲು ಸಂಘಟಕರು ದೇವಸ್ಥಾನದ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಾಂಸ್ಕೃತಿಕ ಉತ್ಸವ
ಏ.16ರ ಸಂಜೆ 6ಕ್ಕೆ ಕುಮಟಾ ಮಣಕಿಯ ಯಕ್ಷಗಾನ ಸಂಶೋಧನಾ ಕೇಂದ್ರದಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ದಕ್ಷ ಯಜ್ಞ ಆಖ್ಯಾನ ಪ್ರದರ್ಶನವಾಗಲಿದೆ. 17ರಂದು ಶ್ವೇತಾ ಅರೆಹೊಳೆ ಅವರ ಗೆಲ್ಲಿಸಬೇಕು ಅವಳ ಏಕ ವ್ಯಕ್ತಿ ಕಾರ್ಯಕ್ರಮ ಹಾಗೂ ರಾತ್ರಿ 9ಕ್ಕೆ ಉಪೇಂದ್ರ ಪೈ ಸೇವಾ ಟ್ರಸ್ಟ ಯಕ್ಷದಶ ಅಡಿ ಶ್ರೀಕೃಷ್ಣಾರ್ಜುನ ಯಕ್ಷಗಾನ ಪ್ರದರ್ಶನ ಆಗಲಿದೆ.