ಯಲ್ಲಾಪುರ; ತಾಲೂಕಿನ ಅರಬೈ.ಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏಳನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಮಕ್ಕಳ ಕವಿಗೋಷ್ಠಿ ನಡೆಯಿತು.
ಕಾರ್ಯಕ್ರಮವನ್ನು ಮುಖ್ಯಾಧ್ಯಾಪಕಿ,ಸಾಹಿತಿ ಶಿವಲೀಲಾ ಹುಣಸಗಿ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸೃಜನಾತ್ಮಕ ಬರವಣಿಗೆಯನ್ನು ಪ್ರೋತ್ಸಾಹ ನೀಡಬೇಕು. ಸೃಜನಶೀಲ ಮನೋಭಾವ ಪ್ರೋತ್ಸಾಹಿಸಬೇಕು.ಮಕ್ಕಳ ಮನಸ್ಸು ಬಾಹ್ಯ ಪ್ರಪಂಚಕ್ಕೆ ಸಕಾರಾತ್ಮಕವಾಗಿ ತೆರೆದುಕೊಳ್ಳಲು ಕವಿಗೋಷ್ಠಿ ಆಯೋಜಿಸಲಾಗಿದೆ ಎಂದರು.
ಮಕ್ಕಳ ಕವಿಗೋಷ್ಠಿಯಲ್ಲಿ ರಕ್ಷಾ ಹೆಗಡೆ,ವೇದಾವತಿ ಗೌಡ,ಕೃತಿಕಾ ಭಟ್ ದಿವ್ಯಾ ಗೌಡ,ಹೇಮಾ ಸಿದ್ದಿ,ಸುಮೀತ ಮಹೇಕರ,ಭವ್ಯಶ್ರೀ ಸಿದ್ದಿ ಕವಿತೆ ಓದಿದರು.ಎಸ್.ಡಿ.ಎಮ್. ಸಿ ಅಧ್ಯಕ್ಷ ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಆಶಾ ನಾಯರ್ ,ಸವಿತಾ ನಾಯ್ಕ,ಸಹ ಶಿಕ್ಷಕರಾದ ಆರ್.ಟಿ ಗೌಡ ಭಾಗವಹಿಸಿದ್ದರು.
ಮಾನ್ಯಾ ಭಟ್ ಪ್ರಾರ್ಥಿಸಿದರು. ಕನಿಷ್ಕಾ ರಾಣೆ ನಿರೂಪಿಸಿದರು. ಪವಿತ್ರಾ ಗೋಪಾಲ ಸಿದ್ದಿ ವಂದಿಸಿದರು.