ಸಿದ್ದಾಪುರ; ಭಾರತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಕೊಡದಿದ್ದರೆ ಇಂದು ಜನಸಾಮಾನ್ಯರು, ಹಿಂದುಳಿದವರು ನರಕ ಯಾತನೆಯನ್ನು ಅನುಭವಿಸಬೇಕಾಗಿತ್ತು. ಅವರು ಕೊಟ್ಟ ಸಂವಿಧಾನದಿಂದ ಮಾತ್ರ ಸಾಮಾಜಿಕ ಸಮಾನತೆ ಸಾಧ್ಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಹೇಳಿದರು.
ಅವರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 131 ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರು ಕೊಟ್ಟಿರುವ ಸಂವಿಧಾನದಿಂದ ಎಷ್ಟೋ ಶೋಷಿತರು, ದಲಿತರು, ಹಿಂದುಳಿದವರು ಧ್ವನಿ ಎತ್ತುವಂತಾಗಿದೆ. ಆದರೆ ಇಂದು ಗಾಂಧಿಜಿಯವರನ್ನು ಕೊಂದ ಗೋಡ್ಸೆ ಸಂಸ್ಕೃತಿ ನಡೆಯುತ್ತಿದೆ. ಪ್ರಜಾ ಪ್ರಭುತ್ವ ಇಲ್ಲದಾಗಿದೆ. ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೆ ಬದ್ಧರಾಗಿ ಮುನ್ನಡೆಯಬೇಕಾಗಿದೆ. ಅವರ ಚಿಂತನೆಗಳಿಗೆ ಜೀವತುಂಬುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ನಿಕಟಪೂರ್ವ ಸದಸ್ಯೆ ಸುಮಂಗಲಾ ವಸಂತ ನಾಯ್ಕ, ತಾ.ಪಂ ನಿಕಟಪೂರ್ವ ಸದಸ್ಯ ನಾಸೀರ್ ವಲ್ಲಿ ಖಾನ್,ತಾಲೂಕ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ ಹೊಸೂರು, ನಗರ ಘಟಕದ ಅಧ್ಯಕ್ಷ ಜಯರಾಮ ನಾಯ್ಕ ಹೊಸೂರು, ಎನ್.ಎಸ್.ಯು ಜಿಲ್ಲಾಧ್ಯಕ್ಷ ವಿಶ್ವ ಗಜಾನನ ಗೌಡ ಇಟಗಿ, ಕಿಸಾನ್ ಸೆಲ್ ತಾಲೂಕ ಅಧ್ಯಕ್ಷ ಪಾಂಡುರಂಗ ನಾಯ್ಕ ಹಳದೋಟ,ಎಸ್.ಸಿ ಸೆಲ್ ತಾಲೂಕಾ ಅಧ್ಯಕ್ಷ ಮೋಹನ ಜೋಗಳೆಕರ್,ಪ್ರಮುಖರಾದ ಬಾಲಕೃಷ್ಣ ನಾಯ್ಕ ಕೋಲಶಿರ್ಸಿ, ಮುನಾವರ್ ಗುರಕರ್, ಮಾರುತಿ ಕೀಂದ್ರ, ಹರೀಶ ನಾಯ್ಕ, ಐ.ಬಿ.ನಾಯ್ಕ ಕಡಕೇರಿ, ಶ್ಯಾಮಲಾ ಗೌಡ ಮೊದಲಾದವರಿದ್ದರು