• Slide
  Slide
  Slide
  previous arrow
  next arrow
 • ಏಕಲ್ ಸಂಸ್ಥೆಯಿಂದ ಬೇಸಿಗೆ ಸಂಸ್ಕಾರ ತರಬೇತಿ ಶಿಬಿರ

  300x250 AD

  ದಾಂಡೇಲಿ: ಹಳಿಯಾಳದ ಏಕಲ್ ಅಭಿಯಾನ ಸಂಚ್ ವತಿಯಿಂದ ಕೋಗಿಲಬಾನ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನಾಲ್ಕು ದಿನಗಳ ಬೇಸಿಗೆ ಸಂಸ್ಕಾರ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು.

  ವಲಯ ಅರಣ್ಯಾಧಿಕಾರಿ ರಾಮನಗೌಡ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂದರೆ ಪಾಲಕರಾದವರು ನಾವು ಮನೆ, ಶಾಲೆ, ಮತ್ತು ಸಮಾಜದಲ್ಲಿ ಉತ್ತಮವಾದ ವಾತಾವರಣ ಇಟ್ಟುಕೊಳ್ಳಬೇಕಾಗುತ್ತದೆ. ಹಿರಿಯರು ಮನೆಯಲ್ಲಿ ಸಂಸ್ಕಾರವನ್ನು ಪಾಲಿಸಿದರೆ ಮಕ್ಕಳು ಹಿರಿಯರನ್ನು ಅನುಸರಿಸಿ ಸನ್ನಡತೆಯನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ ಎಂದರು.

  ನ್ಯಾಯವಾದಿ ಜಯ ನಾಯ್ಕ ಅವರು ಮಾತನಾಡುತ್ತ ಗುಡ್ಡಗಾಡು ಪ್ರದೇಶ ಮಕ್ಕಳನ್ನು ಕರೆತಂದು ಒಳ್ಳೆಯ ಸಂಸ್ಕಾರ ನೀಡುತ್ತಿರುವ ಏಕಲ್ ಅಭಿಯಾನ ಸಂಚ್ ಉತ್ತಮ ಸಾಮಾಜಿಕ ಕಾರ್ಯ ಮಾಡುತ್ತಿದೆ ಎಂದರು. ಸಂಸ್ಕಾರ ತರಬೇತಿ ಶಿಬಿರ ಆಯೋಜಿಸಿರುವ ಹಾಗೂ ಎಕಲ್ ಅಭಿಯಾನ ಸಂಚ್ ದಾಂಡೇಲಿ ಘಟಕದ ಅಧ್ಯಕ್ಷ ಪ್ರಕಾಶ ಬೇಟಕರ ಅವರು ಮಾತನಾಡಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

  300x250 AD

  ಪ್ರಿಯಲ್ ಬೇಟಕರ ಸ್ವಾಗತಿಸಿದರೆ, ಕವಿತಾ ಪೂಜಾರಿ ವಂದಿಸಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮಾಯಾ ರಾಣೆ, ವರ್ತಕ ಮಂಜುನಾಥ ಬೆಳ್ಳಿಕಟ್ಟಿ, ಚನ್ನಬಸಪ್ಪ ಮುರುಗೋಡ ಇದ್ದರು. ಈ ಸಂದಭದಲ್ಲಿ ಸಂಸ್ಥೆಯ ಶಿಕ್ಷಕಿ ರೇಣುಕಾ ನಾಯ್ಕ, ಅಶ್ವಿನಿ ಪಾಟೀಲ, ವರ್ಷಾ ಪರಾಂಜಪೆ ಉದಯ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top