ಯಲ್ಲಾಪುರ: ನಮ್ಮ ನೆಲಕ್ಕೆ ಗತಕಾಲದ ವೈಭವದ ಇತಿಹಾಸವಿದೆ.ಇದನ್ನು ಉಳಿಸಲು ದೇವರು ನಮಗೆ ನೀಡಿದ ಶಕ್ತಿಯನ್ನೇ ಬಳಸಿಕೊಳ್ಳಬೇಕು. ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ಪರಂಪರೆಯ ಪ್ರಜ್ಞೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಮ್ಮಿಂದಾಗಬೇಕು .ಸೇವಾ ಗುಣದಿಂದ ಮಾತ್ರ ಮನುಷ್ಯ ಬೆಳೆಯಬಲ್ಲ. ಸಮಾಜಕ್ಕೆ ನೀಡಿದ ಉತ್ತಮ ಕೊಡುಗೆಗಳು ಶಾಶ್ವತವಾಗಿರಬಲ್ಲದು ಎಂದು ಧಾತ್ರಿ ಪ್ರಾಪರ್ಟಿಸ್ ಮಾಲೀಕರಾದ ವಿ.ಶ್ರೀನಿವಾಸ ಭಟ್ಟ ಹೇಳಿದರು.
ಅವರು ಯಲ್ಲಾಪುರ ತಾಲ್ಲೂಕಿನ ಪ್ರಸಿದ್ಧ ಹೊನ್ನಗದ್ದೆಯ ವೀರಭದ್ರ ದೇವಸ್ಥಾನ ಕಟ್ಟಡದ ಅಭಿವೃದ್ಧಿಗಾಗಿ ಮೂರು ಲಕ್ಷರೂಗಳ ದೇಣಿಗೆಯ ಚೆಕ್ ನ್ನು ಆಡಳಿತ ಸಮಿತಿಗೆ ನೀಡುವ ಮೂಲಕ ಈ ಭಾಗದ ಶಕ್ತಿ ಕೇಂದ್ರವಾದ ವೀರಭದ್ರ ದೇವರ ಪ್ರತಿಷ್ಠಾಪನೆಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೀರಭದ್ರ ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷ ಡಿ.ಜಿ.ಭಟ್ಟ ದುಂಢಿ,ಗೌರವ ಕಾರ್ಯದರ್ಶಿ ಬಾಲಸುಬ್ರಮಣ್ಯ ಭಟ್ಟ, ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಸತೀಶ ಜಿ ಶರ್ಮ ಉಪಸ್ಥಿತರಿದ್ದರು.