ಶಿರಸಿ: ತಾಲೂಕಿನ ಹುಲೇಕಲ್ ಬಳಿಯ ಕಮಟಗಿಯಲ್ಲಿ ತಾಯಿಯೊಬ್ಬಳು ತನ್ನ 6ತಿಂಗಳ ಹಸುಗೂಸಿನೊಂದಿಗೆ ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತಾಯಿ ಅಶ್ವಿನಿ ಮಂಜುನಾಥ್ ಚೆನ್ನಯ್ಯ(28) ಹಾಗೂ ಮಗನಾದ ಸಾತ್ವಿಕ ಚನ್ನಯ್ಯ ಸಾವಿಗೀಡಾದವರಾಗಿದ್ದು ಕೌಟುಂಬಿಕ ಕಲಹವೇ ಸಾವಿಗೆ ಪ್ರೇರಣೆ ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಶಿರಸಿ ಗ್ರಾಮೀಣ ಪೋಲೀಸ್ ಠಾಣೆಯ ಪಿ.ಎಸ್.ಐ ಈರಯ್ಯ ಆಗಮಿಸಿದ್ದು ಗ್ರಾಮೀಣ ಪೊಲೀಸರಿಂದ ತನಿಖೆ ಮುಂದುವರೆದಿದೆ