• Slide
    Slide
    Slide
    previous arrow
    next arrow
  • ನಗುಮುಖದ ಸರಳ ರಾಜಕಾರಣಿಗೆ ಇಂದು ಜನ್ಮ ದಿನದ ಸಂಭ್ರಮ

    300x250 AD

    ಹೊನ್ನಾವರ: ನಗುಮುಖದ ಸರಳ ರಾಜಕಾರಣಿ, ಹಲವು ಸಮಸ್ಯೆಗಳಿಗೆ ವೈಯಕ್ತಿಕವಾಗಿಯೂ ನೆರವಾಗುವ ಮೂಲಕ ಕಾರ್ಯಕರ್ತರೊಡನೆ ಅವಿನಾಭಾವ ಸಂಬಂಧವಿರುವ ಜನನಾಯಕ ಶಿವಾನಂದ ಹೆಗಡೆ ಕಡತೋಕಾ ಇಂದು 46ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

    ಜಿಲ್ಲೆಯ ಮುತ್ಸದ್ಧಿ ರಾಜಕಾರಣಿಯಾದ ಆರ್.ವಿ.ದೇಶಪಾಂಡೆಯವರ ಮೆಚ್ಚಿನ ಶಿಷ್ಯರಾಗಿ ಅವರ ಗರಡಿಯಲ್ಲಿ ಪಳಗಿ ಜನಸೇವೆಯಿಂದಲೇ ಮನೆ ಮಾತಾಗಿರುವ ಶಿವಾನಂದ ಹೆಗಡೆ ಕಡತೋಕಾ ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ತನ್ನದೆ ಆದ ಛಾಪು ಮೂಡಿಸುತ್ತಿದ್ದಾರೆ. ಕಳೆದ 25 ವಸಂತಗಳಿಗೂ ಅಧಿಕ ಕಾಲ ಸೋಲಿಲ್ಲದ ಸರದಾರರಾಗಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಜಿಲ್ಲಾಪಂಚಾಯತಿ ಸದಸ್ಯರಾಗಿ, ಪ್ರಸುತ್ತ ಕಿಸಾನ್ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾಗಿರುವ ಶಿವಾನಂದ ಹೆಗಡೆ ನೊಂದವರ ಧ್ವನಿಯಾಗಿ ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ ರಾಜಕಾರಣಿಯಾಗಿದ್ದಾರೆ.

    1995 ರಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇವರ ಆಡಳಿತದಿಂದ ಪ್ರೇರಣೆಗೊಂಡು ತಮ್ಮ ರಾಜಕೀಯ ಜೀವನ ಆರಂಭಿಸಿ ಶಾಸಕ ಆರ್.ವಿ.ಡಿಯೊಂದಿಗೆ ಇಂದಿಗೂ ಹೆಜ್ಜೆ ಇಡುತ್ತಿರುವರಲ್ಲಿ ಓರ್ವರಾಗಿದ್ದಾರೆ.

    ಪ್ರಥಮವಾಗಿ 1996ರಲ್ಲಿ ಜನತಾದಳದಿಂದ ತಾಲೂಕ ಪಂಚಾಯತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. ನಂತರ ಗುರುವಿನೊಂದಿಗೆ ಕಾಂಗ್ರೇಸ್ ಪಕ್ಷ ಸೆರ್ಪಡೆಯಾಗಿ 2000ರಲ್ಲಿ ಮತ್ತೆ ತಾಲೂಕ ಪಂಚಾಯತಿಗೆ ಸ್ಪರ್ಧಿಸಿ ಅಧ್ಯಕ್ಷರಾಗಿ ತಾಲೂಕಿನ ಸಮಸ್ಯೆ ಬಗೆಹರಿಸುವ ಮೂಲಕ ಚಿರಪರಿಚಿತರಾದರು. ಪಕ್ಷದ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ, ಬ್ಲಾಕ್ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿರುವ ಹಿರಿಮೆ ಇವರದ್ದಾಗಿದೆ. ರಾಜಕೀಯದ ಜೊತೆ ಸಹಕಾರಿ ರಂಗದಲ್ಲಿ ಆಸಕ್ತಿ ಹೊಂದಿ 1996ರಿಂದ ನಿರಂತರವಾಗಿ ಪ್ರಸುತ್ತ ಅವಧಿಯವರೆಗೆ ನಿರ್ದೆಶಕರಾಗಿ ಸೇವೆ ಸಲ್ಲಿಸುತ್ತಿರುವುದು ಇವರ ಸಮಾಜಮುಖಿ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. 2016ರಲ್ಲಿ ಹಳದೀಪುರ ಜಿ.ಪಂ. ಪ್ರಥಮ ಬಾರಿಗೆ ಸ್ಪರ್ಧೆ ನಡೆಸಿ ಪ್ರಥಮ ಪ್ರಯತ್ನದಲ್ಲೆ ಆಯ್ಕೆಯಾಗುವ ಮೂಲಕ ಆ ಭಾಗದ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ.

    300x250 AD

    ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ, ಆರೋಗ್ಯ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘಟಿಕರಿಗೆ ಆರ್ಥಿಕ ನೆರವನ್ನು ನೀಡಿ ಪೊತ್ಸಾಹಿಸುತ್ತಿದ್ದಾರೆ. ಕೊವಿಡ್ ಮಹಾಮಾರಿ ಸಮಯದಲ್ಲಿ ತಾಲೂಕಿನ ವಿವಿಧ ಬಡ ಕುಟುಂಬಗಳಿಗೆ ದಿನಸಿ ಕಿಟ್, ಮೆಡಿಕಲ್ ಸೇವೆ ನೀಡುವ ಮೂಲಕ ನೊಂದವರಿಗೆ ನೆರವಾದರು. ತಾಲೂಕಿನ ಆಸ್ಪತ್ರೆಯ ಡಯಾಲಿಸಿಸ್ ಘಟಕ ಸ್ಥಗಿತಗೊಳ್ಳುವ ಭೀತಿ ಎದುರಾದಾಗ ವೈಯಕ್ತಿಕವಾಗಿ 50 ಸಾವಿರ ಧನಸಹಾಯ ಮಾಡುವ ಮೂಲಕ ಆರ್ಥಿಕ ಸಹಕಾರ ನೀಡಿದ್ದಾರೆ.

    ಸಮಾಜಮುಖಿ ಕಾರ್ಯಕ್ಕೆ ಇವರಿಗೆ ಆಯುಷ್ಯ, ಆರೋಗ್ಯ, ನೀಡಿ ರಾಜಕೀಯವಾಗಿ ಇನ್ನಷ್ಟು ಸ್ಥಾನಮಾನಗಳು ದೊರೆಯಲಿ ಎಂದು ಹಳದಿಪುರ ಗ್ರಾಮ ಪಂಚಾಯತ ಸದಸ್ಯರಾದ ನವೀನ ನಾಯ್ಕ್, ಗಿರೀಶ್ ಗೌಡ ಕರ್ಕಿ ಗ್ರಾ. ಪಂಚಾಯತ್ ಸದಸ್ಯರಾದ ಹರಿಶ್ಚಂದ್ರ ನಾಯ್ಕ್ ಹಾಗೂ ಶಿವಾನಂದ ಹೆಗಡೆ ಕಡತೋಕ ಅಭಿಮಾನಿ ಬಳಗದವರು ಶುಭಕೋರಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top