ಶಿರಸಿ: ಅಸ್ಪೃಶ್ಯತೆ, ಅಸಮಾನತೆ,ಜಾತೀಯತೆಯತೆಯ ವಿರುದ್ಧ ಹೋರಾಡಿದ ಡಾ ಬಿ ಅರ್ ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ ಆಗಿದ್ದರು ಎಂದು ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಟಿ ಎಸ್ ಹಳೆಮನಿ ಹೇಳಿದರು.
ಅವರು ಅಂಬೇಡ್ಕರ್ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ
ಮಹಾತ್ಮಾ ಗಾಂಧಿ, ಭಗವಾನ್ ಬುದ್ಧ,ಬಸವಣ್ಣ ನವರಂತೆ ಅಂಬೇಡ್ಕರ್ ಅವರು ಮಹಾ ನಾಯಕರಾಗಿದ್ದರು ಅಸ್ಪೃಶ್ಯತೆಯನ್ನು ತೊಲಗಿಸಿ ದಲಿತರು ರಾಜಕೀಯ ಅಧಿಕಾರ ಪಡೆದಾಗ ಮಾತ್ರ ಸಮಾನತೆ ಸಾಧ್ಯ ಎಂದು ಸಾರಿದರು.
ದೌರ್ಜನ್ಯ ಹಾಗೂ ಶೋಷಣೆ ಇಲ್ಲದ ಸಮಾಜ ನಿರ್ಮಾಣದ ಗುರಿ ಅವರದಾಗಿತ್ತು.ಭಾರತದ ಚರಿತ್ರೆಯಲ್ಲಿ ಅವರೊಬ್ಬ ಸುಧಾರಣಾ ವಾದಿ ಆಗಿದ್ದರು ಎಂದರು. ದಲಿತರ ತುಳಿತಕ್ಕೆ ಒಳಗಾದವರ ಬದುಕನ್ನು ಪುನರ್ನಿರ್ಮಿಸಲು ಶ್ರಮಿಸಿದರು.ಅವರ ನಿಜವಾದ ವಿಚಾರಗಳಿಂದ ಇಂದಿನ ಸಮಾಜ ಎಚ್ಚೆತ್ತುಕೊಳ್ಳಲಿ ಎಂದರು.ಇಂದು ಭಗವಾನ್ ಮಹಾವೀರ ಜಯಂತಿಯೂ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡು ಪುಷ್ಪಾರ್ಚನೆ ನೆರವೇರಿಸಿದರು.