• Slide
  Slide
  Slide
  previous arrow
  next arrow
 • ಯಕ್ಷಗಾನ ಉಳಿಸಿ, ಬೆಳೆಸಿರುವುದು ಗ್ರಾಮೀಣ ಜನತೆ: ಉಪೇಂದ್ರ ಪೈ

  300x250 AD

  ಸಿದ್ದಾಪುರ: ಕೊಡ್ಸರದ ಜೈ ಶ್ರೀರಾಮ್ ಸಾಂಸ್ಕೃತಿಕ ಸಂಘದಿಂದ 21ನೇ ವರ್ಷದ ಯಕ್ಷಗಾನ ಕಾರ್ಯಕ್ರಮ ತಾಲೂಕಿನ ಕೊಡ್ಸರದಲ್ಲಿ ನಡೆಯಿತು.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಸಾಕಷ್ಟು ವರ್ಷಗಳಿಂದ ನಡೆಯುತ್ತಿದೆ. ಪ್ರಭು ಶ್ರೀರಾಮನ ಹೆಸರಿನಲ್ಲಿ ಒಂದು ಸಂಘ ಕಟ್ಟಿ 21 ವರ್ಷಗಳ ಕಾಲ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವುದು ಸಂತಸದ ಸಂಗತಿಯಾಗಿದೆ. ಸಾಮಾಜಿಕ ಜಾಲತಾಣಗಳು ಸಕ್ರಿಯವಾಗುವುದಕ್ಕಿಂತ ಮೊದಲು ಪ್ರತಿ ಮನೆಯಲ್ಲೂ ಭಜನೆ ಪಾಠಗಳು ನಡೆಯುತ್ತಿದ್ದವು. ಯಕ್ಷಗಾನವನ್ನು ಉಳಿಸಿ, ಬೆಳೆಸಿರುವುದು ಗ್ರಾಮೀಣ ಭಾಗದ ಜನತೆ ಎಂದರು.

  ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಶಿರಸಿ- ಸಿದ್ದಾಪುರ ತಾಲೂಕಿನಲ್ಲಿ ಒಟ್ಟು 10 ಯಕ್ಷಗಾನ ಪ್ರದರ್ಶನವನ್ನು ಮಾಡುತ್ತಿದ್ದೇವೆ. ಶಿಕ್ಷಣಕ್ಕಾಗಿ ಉಪೇಂದ್ರ ಪೈ ಸೇವಾ ಟ್ರಸ್ಟ್ ಶ್ರಮಿಸುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶಾಲೆಗಳನ್ನು ದತ್ತುತೆಗೆದುಕೊಂಡು ಶಾಲೆಯ ಅಭಿವೃದ್ಧಿಯತ್ತ ಟ್ರಸ್ಟ್ ಶ್ರಮಿಸುತ್ತಿದೆ ಎಂದರು.

  ಜೈ ಶ್ರೀರಾಮ್ ಸಾಂಸ್ಕೃತಿಕ ಸಂಘ ದ ಅಧ್ಯಕ್ಷ ಚಂದ್ರಶೇಖರ (ರವಿ) ಹೆಗಡೆ ಗದ್ದೆಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 21 ವರ್ಷಗಳಿಂದ ಸೇವಾರ್ಥವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ಶ್ರೀರಾಮನ ಭಕ್ತಿಯಿಂದ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

  300x250 AD

  ರಜನಿ ಹೆಗಡೆ ಕೋಡ್ಸರ ಹಾಗೂ ಸನ್ನಿಧಿ ಹೆಗಡೆ ಬಾಳೆಗದ್ದೆ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ನಂತರ ಕಲಾಭಾಸ್ಕರ ಯಕ್ಷಗಾನ ನಾಟಕ ರಂಗಭೂಮಿ ಹಾಗೂ ಜಾನಪದ ಕಲಾಸಂಸ್ಥೆ ಇಟಗಿ ಇವರಿಂದ ಶ್ರೀರಾಮ ನಿಜ ಪಟ್ಟಾಭಿಷೇಕ ಹಾಗೂ ಪುತ್ರಕಾಮೇಷ್ಠಿ ಎಂಬ ಯಕ್ಷಗಾನ ಬಯಲಾಟ ನಡೆಯಿತು.

  ಪತ್ರಕರ್ತ ಗುರುನಾಥ ಹುಕ್ಲಕೈ ನಿರೂಪಿಸಿದರು. ಆರ್.ಜಿ.ಭಟ್ ಯಲುಗಾರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೊಡ್ಸರ ಮಹಾಲಕ್ಷ್ಮಿ ಪ್ರಾಥಮಿಕ ಶಾಲೆಯ ಅಧ್ಯಕ್ಷ ಪ್ರಕಾಶ ಹೆಗಡೆ ಯಲೂಗಾರ, ಆನಂದ ಶೇಟ್ ಕೊಡ್ಸರ, ಪರಮೇಶ್ವರ ನಾಯ್ಕ ಹಳ್ಳಿಬೈಲ್, ಹಸ್ರಗೊಡ ಗ್ರಾ.ಪಂ ಸದಸ್ಯ ಚಿನ್ಮಯ ಭಟ್ ಯಲುಗಾರ, ಶ್ರೀಕಾಂತ ಹೆಗಡೆ ಹುಣ್ಸೆಕೊಪ್ಪ, ಸತೀಶ ಹೆಗಡೆ ಸಂಕದಮನೆ ಸೇರಿ ಹಲವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top