• Slide
    Slide
    Slide
    previous arrow
    next arrow
  • ಆಕಸ್ಮಿಕ ಬೆಂಕಿ: ಹುಲ್ಲು ತುಂಬಿದ್ದ ಬೊಲೆರೋ ಬೆಂಕಿಗಾಹುತಿ

    300x250 AD

    ಅಂಕೋಲಾ: ಭತ್ತದ ಒಣ ಹುಲ್ಲನ್ನು ತುಂಬಿ ಸಾಗಿಸುತ್ತಿದ್ದ ವಾಹನವೊಂದು ದಾರಿಮಧ್ಯೆ ಆಕಸ್ಮಿಕ ಬೆಂಕಿ ಅವಘಡಕ್ಕೆ ಸಿಲುಕಿ ಸುಟ್ಟು ಕರಕಲಾದ ಘಟನೆ ಬೆಳಸೆ ಗ್ರಾಪಂ ವ್ಯಾಪ್ತಿಯ ತಳಗದ್ದೆ ರೈಲ್ವೆ ಬ್ರಿಜ್ ಹತ್ತಿರ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಶೇಖರ ಸುಕ್ರು ಗೌಡ ಇವರು ಬೊಲೆರೋ ಪಿಕಪ್ ವಾಹನದಲ್ಲಿ ತಳಗದ್ದೆಯಿಂದ – ಕುಮಟಾ ಕಡೆ ತಮ್ಮ ವಾಹನದಲ್ಲಿ ಸುಮಾರು 2000 ಕಟ್ಟು ಗಳಷ್ಟು ಒಣ ಹುಲ್ಲನ್ನು ಸಾಗಿಸುತ್ತಿರುವ ವೇಳೆ, ದಾರಿಮಧ್ಯೆ ವಿದ್ಯುತ್ ತಂತಿ ತಗುಲಿ ,ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಗಳಿವೆ.
    ಗಾಡಿಯ ಹಿಂಬದಿ ಬೆಂಕಿ ತಗುಲಿದ್ದರೂ, ಗಾಡಿ ಚಲಾಯಿಸುತ್ತಿದ್ದ ಚಾಲಕನಿಗೆ ತಡವಾಗಿ ಗಮನಕ್ಕೆ ಬಂದು ಗಾಡಿ ನಿಲ್ಲಿಸಿ ನೋಡುವಷ್ಟರಲ್ಲಿ ಬೆಂಕಿ ಹೊತ್ತಿ ಉರಿಯಲಾರಂಬಿಸಿದೆ. ನಂತರ ಅಗ್ನಿ ಶಾಮಕ ಠಾಣೆಗೆ ವಿಷಯ ತಿಳಿಸಿ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಸ್ಥಳೀಯರು ಸಹಕರಿಸಿದರು. ನೀರಿನ ಟ್ಯಾಂಕರನ್ನು ಪ್ರತ್ಯೇಕವಾಗಿ ತಂದು ಬೆಂಕಿ ನಂದಿಸಲು ಯತ್ನಿಸಲಾಯಿತು.ಈ ವೇಳೆಗಾಗಲೇ ಗಾಡಿಯಲ್ಲಿದ್ದ ಬಹುತೇಕ ಹುಲ್ಲಿನ ಕಟ್ಟುಗಳು ಬೆಂಕಿಗಾಹುತಿಯಾಗಿದ್ದವು. ಗಾಡಿಯ ಟೈರ್ ಸಂಪೂರ್ಣ ಸುಟ್ಟು ಕರಕಲಾಗಿದೆ.

    ಗಾಡಿಯ ಮುಂಭಾಗದ ಸ್ಟೇರಿಂಗ್ ಹತ್ತಿರ, ಹಾಗೂ ಡ್ರೈವರ್ ಸೀಟ್ ಮತ್ತಿತರ ಭಾಗಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿದ್ದು ಸೀಟ್ ಪಕ್ಕ ಕೆಳಗಡೆ ಇಟ್ಟಿದ್ದ ಹಲಸಿನ ಹಣ್ಣು ಸಹ ಗುರುತಿಸಲಾಗದಂತೆ ಕರಕಲಾಗಿದೆ. ಸುಮಾರು 7000 ರೂ ಮೌಲ್ಯದ ಒಣಹುಲ್ಲು, ತಾಡಪತ್ರೆ ಹಾಗೂ ಲಕ್ಷಾಂತರ ಮೌಲ್ಯದ ವಾಹನ ಸುಟ್ಟು ಹೋಗಿದ್ದು ಒಟ್ಟಾರೆ ಅಂದಾಜು ಹಾನಿ ಹಾಗೂ ಇತರೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ
    .

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top