• Slide
    Slide
    Slide
    previous arrow
    next arrow
  • ಮಂಜುಗುಣಿಯಲ್ಲಿ ಏ.16ಕ್ಕೆ ಮುಂಜಾನೆಯೇ ಮಹಾರಥೋತ್ಸವ

    300x250 AD

    ಶಿರಸಿ: ಕರ್ನಾಟಕದ ತಿರುಪತಿ ಎಂದೇ ಹೆಸರಾದ ಮಂಜುಗುಣಿಯ ಶ್ರೀವೆಂಕಟರಮಣ ದೇವರ ಮಹಾರಥೋತ್ಸವ ಏ.16ರಂದು ಮುಂಜಾನೆ 8ಕ್ಕೆ ನಡೆಯಲಿದೆ.

    ಅಂದು ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಬೆಳಿಗ್ಗೆ 7ಕ್ಕೆ ಶ್ರೀದೇವರ ರಥಾರೋಹಣ ನಡೆಯಲಿದೆ. 8ಕ್ಕೆ ಭಕ್ತರ ಹರ್ಷೋದ್ಘಾರದ ನಡುವೆ ರಥೋತ್ಸವ ನಡೆಯಲಿದೆ. ರಥೋತ್ಸವದ ಬಳಿಕ ಅದೇ ದಿನ ನಡುರಾತ್ರಿ 1 ಗಂಟೆ ತನಕ ರಥಾರೂಢ ಶ್ರೀ ದೇವರ ದರ್ಶನ ನಡೆಯಲಿದೆ ಎಂದು ಮಂಜುಗುಣಿಯ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟತಿಳಿಸಿದ್ದಾರೆ.

    ಏ.2ರಿಂದ ಮಹಾರಥಪೂಜೆಯೊಂದಿಗೆ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಏ.10ಕ್ಕೆ ಪ್ರಾರ್ಥನೆ, ದೇವನಾಂದಿ ಮೂಲಕ ಯಾಗಶಾಲಾ ಪ್ರವೇಶ ಮಾಡಲಾಗಿದೆ. ಏ .11ಕ್ಕೆ ಧ್ವಜ ಪೂಜೆ, ಧ್ವಜ ಬಲಿಗಳು, ರತ್ನ ಮಂಟಪೋತ್ಸವ ನಡೆದಿವೆ. ಏ.12ಕ್ಕೆ ಭೂತರಾಜ ಬಲಿ, ಗಜಯಂತ್ರೋತ್ಸವ, ಏ.13ಕ್ಕೆ ಸಿಂಹಯಂತ್ರೋತ್ಸವ ಕಾರ್ಯಕ್ರಮಗಳ ಜರುಗಿವೆ.

    300x250 AD

    ಏ.14ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆ ರಾತ್ರಿ ಶೇಷ ಯಂತ್ರೋತ್ಸವ, 15ಕ್ಕೆ ಶ್ರೀದೇವರ ಪ್ರತಿಷ್ಠೆ ದಿನ ಕೂಡ ಆಗಿದ್ದು, ಅದೇ ದಿನ ರಾತ್ರಿ ವಿಶೇಷ ದಂಡಬಲಿ, ಭೂತರಾಜ ಬಲಿ ಹಾಗೂ ಗರುಡಯಂತ್ರೋತ್ಸವ ನಡೆಯಲಿದೆ. 16ರ ಬೆಳಿಗ್ಗೆಯೇ ಮಹಾರಥೋತ್ಸವ ನಡೆಯಲಿದೆ ಎಂಬುದು ವಿಶೇಷವಾಗಿದೆ. 16ರ ಮುಂಜಾನೆ ರಥ ಶುದ್ಧಿ, ರಥ ಪೂಜಾ, ರಥಬಲಿಗಳ ಮೂಲಕ ರಥಾರೋಹಣಗೊಳ್ಳುವ ವೆಂಕಟರಮಣ ದೇವರಿಗೆ ವಿಶೇಷ ಪೂಜೆಗಳೂ ನಡೆಯಲಿವೆ. ಮಧ್ಯಾಹ್ನ ಪ್ರಸಾದ ಭೋಜನ ಕೂಡ ನಡೆಯಲಿದೆ. 17ಕ್ಕೆ ಅವಭೃತ ಸ್ನಾನ, 30ಕ್ಕೆ ಸಂಪ್ರೋಕ್ಷಣ್ಯ ನಡೆಯಲಿದೆ ಎಂದು ಶ್ರೀನಿವಾಸ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    Share This
    300x250 AD
    300x250 AD
    300x250 AD
    Leaderboard Ad
    Back to top