ಯಲ್ಲಾಪುರ; ಸಮುದಾಯ ತನಗೆ ಕೊಟ್ಟಿದ್ದನ್ನು ಮರೆಯದೇ ಮುಂದೆ ಸಮುದಾಯ ನೀಡಿದ ಗೌರವಕ್ಕೆ ಪ್ರೀತಿಯನ್ನು ತೋರಿಸುವಂತೆ ಆಗಬೇಕು.ಕೆಲವರ ಬದುಕು ಜೀವನವೇ ನಮಗೆ ಮಾರ್ಗದರ್ಶನ.ಅಂತವರ ಬದುಕಿನ ಬಗ್ಗೆ ತಿಳಿದುಕೊಂಡು ಅವರ ಆದರ್ಶವನ್ನು ಅಳವಡಿಸಿಕೊಳ್ಳೋಣ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಅವರು ಇಲ್ಲಿಯ ಅಡಿಕೆ ಭವನದಲ್ಲಿ ಅಖಿಲ ಹವ್ಯಕ ಮಹಾಸಭಾ ಆಶ್ರಯದಲ್ಲಿ ಯಲ್ಲಾಪುರ ತಾಲೂಕಿನ ಫಲಾನುಭವಿಗಳಿಗೆ ವಿದ್ಯಾಪ್ರೋತ್ಸಾಹ ಧನ ವಿತರಣಾ ಸಮಾರಂಭ ಉದ್ಘಾಟಿಸಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ ಜಿ.ಎಲ್.ಹೆಗಡೆಯವರನ್ನು ಸನ್ಮಾನಿಸಿ ಮಾತನಾಡಿದರು.
ಸಮುದಾಯ ಸಮಾಜದ ಋಣ ತೀರಿಸುವ ಕೆಲಸವನ್ನು ಇಂದು ಪ್ರೋತ್ಸಾಹ ಪಡೆದವರು ಮುಂದೆ ಮಾಡಬೇಕು ಎಂದು ಹೇಳಿದರು.ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ,ಪ್ರತಿಭೆಗಳಿಗೆ ಪ್ರೋತ್ಸಾಹಿಸುವವರಿಗೆ ಕೊರತೆಯಿಲ್ಲ.ಅರ್ಹತೆಯನ್ನು ಬೆಳೆಸಿಕೊಂಡು ಮುನ್ನೆಡೆಯಿರಿ ಎಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ ಮಾತನಾಡಿ,ಪರಂಪರೆಯ ಮೌಲ್ಯವನ್ನು ಎತ್ತಿಹಿಡಿಯುವ ಯಕ್ಷಗಾನ ಕಲೆ ಭಾರತೀಯ ಸಂಸ್ಕೃತಿ, ತತ್ವವನ್ನು ಸಾರುತ್ತದೆ.ಇಂತಹ ಯಕ್ಷಗಾನಕ್ಕಾಗಿ ಕೆಲವರ ಬದುಕಾದರೂ ಮುಡಿಪಾಗಿರಲಿ ಎಂದು ಹೇಳಿದರು.ಹವ್ಯಕ ಮಹಾಸಭಾ ದ ನಿರ್ದೇಶಕ ಅರ್ಥಧಾರಿ ಮೋಹನ ಹೆಗಡೆ ಹೆರವಟ್ಟಾ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ,ಅಡಿಕೆ ವರ್ತಕ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ,ಹವ್ಯಕ ಸಂಘದ ತಾಲೂಕಾಧ್ಯಕ್ಷ ಡಿ.ಶಂಕರ ಭಟ್ಟ,ನಿರ್ದೇಶಕರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ,ಪ್ರಶಾಂತ ಪ್ರಮೋದ ಹೆಗಡೆ,ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ,ಉಪಸ್ಥಿತರಿದ್ದರು.ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸ್ವಾಗತಿಸಿದರು.ಮಹಾಸಭಾದ ಕಾರ್ಯದರ್ಶಿ ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಭಾರತೀಯ ಸಂಸ್ಕೃತಿ, ಪರಂಪರೆಯ ಮೌಲ್ಯವನ್ನು ಎತ್ತಿ ಹಿಡಿಯುವ ಕಲೆ ಯಕ್ಷಗಾನ:ಡಾ. ಜಿ. ಎಲ್.ಹೆಗಡೆ
