ಸಿದ್ದಾಪುರ: ಮನುಷ್ಯನಿಗೆ ಏನೆಲ್ಲ ಸಂಪಾದನೆ ಮಾಡುತ್ತಿದ್ದರೂ ಶಾಂತಿ- ನೆಮ್ಮದಿ ಇಲ್ಲ. ಇಂತಹ ಸಮಾರಂಭದಲ್ಲಿ ಭಾಗಿಯಾದಾಗ ನೆಮ್ಮದಿ ಸಿಗುತ್ತದೆ ಎಂದು ಕೋಣಂದೂರು ಶ್ರೀಶೈಲ ಶಾಖಾ ಬ್ರಹನ್ಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ಅವರು ತಾಲೂಕಿನ ಅವರಗುಪ್ಪ ಗ್ರಾಮದ ಶ್ರೀವೀರಭದ್ರ ದೇವಾಲಯದ 17ನೇ ವರ್ಷದ ವಾರ್ಷಿಕೋತ್ಸವದ ಧರ್ಮ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲದಕ್ಕೂ ಮಿಗಿಲಾಗಿದ್ದ ಸಂಪತ್ತು ಶಾಂತಿ ಮತ್ತು ಸಮಾಧಾನ. ಭಕ್ತಿ- ಶ್ರದ್ಧೆ ಜೀವನಕ್ಕೆ ಆಧಾರ ಎಂದರು.
ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಎಂ.ನಾಯ್ಕ, ಉಪಾಧ್ಯಕ್ಷ ಬೊಮ್ಮಜ್ಜ ಬಿ.ಗೊಂಡ, ಕಾರ್ಯದರ್ಶಿ ನಾಗರಾಜ ಕೆ.ನಾಯ್ಕ, ಪರಮೇಶ್ವರ ಶಾಸ್ತ್ರಿ, ಗ್ರಾಮ ಪಂಚಾಯತ್ ಸದಸ್ಯರಾದ ತಿಲಕುಮಾರ, ಮಾಬ್ಲೇಶ್ವರ ನಾಯ್ಕ, ಬಂಗಾರಪ್ಪ ಗೌಡ ಉಪಸ್ಥಿತರಿದ್ದರು. ಸುಧಾಕರ ನಾಯ್ಕ ನಿರೂಪಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.