• first
  Slide
  Slide
  previous arrow
  next arrow
 • ಸ್ವಚ್ಛ ಕಾರವಾರಕ್ಕಾಗಿ ಸೈಕ್ಲಿಂಗ್ ಮಾಡಿದ ಕಾರವಾರಿಗರು

  300x250 AD

  ಕಾರವಾರ: ಸ್ವಚ್ಛ ಕಾರವಾರದ ಜನಜಾಗೃತಿ ಮೂಡಿಸುವ ಸಲುವಾಗಿ ಕಾರವಾರ ನಗರದಲ್ಲಿ ನಮ್ಮ ಕಾರವಾರ ಸೈಕ್ಲೋಥಾನ್- 22 ಸೈಕಲ್ ರ್ಯಾಲಿ ನಡೆಯಿತು. ಎಂಟು ವರ್ಷದಿಂದ 70 ವರ್ಷದವರೆಗಿನ 150ಕ್ಕೂ ಅಧಿಕ ಜನ ಸೈಕ್ಲಿಂಗ್ ಮಾಡುವ ಮೂಲಕ ಕಾರವಾರ ಸುತ್ತಿ ಸ್ವಚ್ಛ ಕಾರವಾರದ ಜಾಗೃತಿ ಸಾರಿದರು.

  ನಮ್ಮ ಕಾರವಾರ ತಂಡ ಹಾಗೂ ರೋಟರ್ಯಾಕ್ಟ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಈ ಸೈಕಲ್ ರ್ಯಾಲಿಯು ತೇಲಂಗ ರೋಡ್‍ನಿಂದ ಪ್ರಾರಂಭವಾಗಿ ಕಾಜುಬಾಗ್, ಸವಿತಾ ಸರ್ಕಲ್, ಸುಭಾಷ್ ಸರ್ಕಲ್ ಮೂಲಕ ಸಾಗಿ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯ ಹಿಂಭಾಗದಲ್ಲಿ ಸಮಾಪ್ತಿಗೊಂಡಿತು.

  300x250 AD

  ಸೈಕ್ಲೋಥಾನ್‍ನಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಟಿ- ಶರ್ಟ್ ವಿತರಿಸಲಾಗಿತ್ತು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಯಶ್ವಂತ್ ಯಾದವ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸೈಕ್ಲಿಂಗ್ ಹಾಗೂ ಸ್ವಚ್ಛ ಕಾರವಾರದ ಕುರಿತಾಗಿ ಮಾತನಾಡಿದರು. ಈ ವೇಳೆ ಅವರು ಲಾಟ್ಸ್ ಎತ್ತುವ ಮೂಲಕ ಓರ್ವ ಅದೃಷ್ಟಶಾಲಿ ಸೈಕ್ಲಿಸ್ಟನ್ನ ಆಯ್ಕೆ ಮಾಡಿ ಅವರಿಗೆ ಸ್ಮಾರ್ಟ್ ವಾಚ್ ಅನ್ನು ಪ್ರಶಸ್ತಿಯನ್ನಾಗಿ ನೀಡಲಾಯಿತು. ತದನಂತರ ಯುವಕ- ಯುವತಿಯರ ತಂಡದಿಂದ ಸ್ಟ್ರೀಟ್ ಡ್ಯಾನ್ಸ್ ಕಾರ್ಯಕ್ರಮ ಕೂಡ ನಡೆಯಿತು.


  Share This
  300x250 AD
  300x250 AD
  300x250 AD
  Back to top