ಅಂಕೋಲಾ: ಇಲ್ಲಿನ ಡಾ.ಪ್ರಭಾಕರ ನಾಯಕರವರ ‘ಜೀವ ಮಂಡಲ’ (ಕವಿತಾ ಸಂಕಲ), ‘ನಮ್ಮೊಡಲ ಹಾಡು’ (ಗುಮಟೆ ಪದಗಳ ಸಂಕಲನ), ‘ಮಂಗಳಾರತಿ’ (ಚುಟುಕುಗಳ ಸಂಕಲನ) ಏ.15ರ ಸಂಜೆ 3.45ಕ್ಕೆ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಬಿಡುಗಡೆಯಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಅವರು ಕೃತಿಗಳ ಬಿಡುಗಡೆ ಮಾಡುವರು. ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಜಿ.ವಿ.ಹೆಗಡೆಯವರು ಈ ಕೃತಿಗಳ ಪರಿಚಯ ಮಾಡಿಕೊಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆಯವರು ವಹಿಸುವರು. ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೃತಿಕಾರರಾದ ಡಾ.ಪ್ರಭಾಕರ ನಾಯಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.