
ಮುಂಡಗೋಡ: ಹೊಲವೊಂದರಲ್ಲಿ ಆಹಾರ ಅರಿಸಿ ಬಂದಿದ್ದ ಜಿಂಕೆಯು ಗದ್ದೆಗೆ ಹಾಕಿದ ಬಲೆಗೆ ಸಿಲುಕಿಕೊಂಡು ನರಳಾಡುತ್ತಿದ್ದಾಗ ಅರಣ್ಯ ಸಿಬ್ಬಂದಿಗಳಾದ ಶ್ರೀಧರ ಭಜಂತ್ರಿ ಹಾಗೂ ಇನ್ನಿತರರು ಸೇರಿ ಜಿಂಕೆಯನ್ನು ರಕ್ಷಿಸಿದ್ದಾರೆ.
ತಾಲೂಕಿನ ಅಜ್ಜಳ್ಳಿ ಗ್ರಾಮದ ವಿಷ್ಣು ಆಲದಕಟ್ಟಿ ಎಂಬುವರು ತಮ್ಮ ಗೋವಿನ ಜೋಳದ ಬೆಳೆಯ ರಕ್ಷಣೆಗೆ ಗದ್ದೆಗೆ ಸುತ್ತಲು ಬಲೆ ಹಾಕಿದ್ದರು. ಆಹಾರ ಅರಿಸಿ ಬಂದಿದ್ದ ಜಿಂಕೆಯ ಕೋಡು ಬಲೆಗೆ ಸಿಲುಕಿಕೊಂಡು ನರಳಾಡುತ್ತಿದ್ದ ಜಿಂಕೆಯನ್ನು ನೋಡಿದ ರೈತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅರಣ್ಯ ರಕ್ಷಕ ಶ್ರೀಧರ ಭಜಂತ್ರಿ ಜಿಂಕೆಯ ಕೋಡಿಗೆ ಸಿಲುಕಿದ ಬಲೆಯನ್ನು ಬಿಡಿಸಿ ಜಿಂಕೆಯನ್ನು ರಕ್ಷಸಿದ್ದಾರೆ.
ಈ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಶಿವಪ್ಪ ಶಿರ್ಮಾ, ನಿಸಾರ್ ಭಾಷಾ, ದೇವರಾಜ ಆಡಿನ್ ಕಾರ್ಯದಲ್ಲಿ ಭಾಗವಹಿಸಿದ್ದರು.