ಮುಂಡಗೋಡ: ಪಟ್ಟಣದ ಹಳೂರ ಓಣಿಯಲ್ಲಿರುವ ಶ್ರೀಮಾರಿಕಾಂಬಾ(ದ್ಯಾಮವ್ವ) ದೇವಿ ದೇವಸ್ಥಾನ ಮತ್ತು ಚೌತಮನೆ(ಜಾತ್ರಾ ಗದ್ದುಗೆ)ಯಲ್ಲಿ ಏ.15ರಿಂದ ಏ.21ರವರೆಗೆ ಉಡಿ ತುಂಬುವ, ಶತಚಂಡಿ ಹವನ, ಲಕ್ಷ ದೀಪೋತ್ಸವ, ಅನ್ನ ಪ್ರಸಾದ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಮಾರಿಕಾಂಬಾ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರಾದ ರಮೇಶ ಕಾಮತ ತಿಳಿಸಿದ್ದಾರೆ.
ಏ.15ರಂದು ಸಂಜೆ 6ಗಂಟೆಯಿಂದ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ, ಏ.19ರಂದು ಮುಂಜಾನೆ ಗಣ ಹವನ ಮತ್ತು ಸಂಜೆ ದುರ್ಗಾದೀಪ ನಮಸ್ಕಾರ ಕಾರ್ಯಕ್ರಮ, ಏ.20ರಂದು ಸಹಸ್ರ ಪಾರಾಯಣ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ, ಏ.21ರಂದು ಮುಂಜಾನೆ ಶತಃಚಂಡಿ ಮಹಾಯಾಗ ಮತ್ತು ಪೂರ್ಣಾಹುತಿ ನಂತರ ಅನ್ನ ಪ್ರಸಾದ, ಸಂಜೆ ಲಕ್ಷ ದೀಪೋತ್ಸವ ನಂತರ ರಾತ್ರಿ ಅನ್ನ ಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.