• Slide
  Slide
  Slide
  previous arrow
  next arrow
 • ರಾಷ್ಟ್ರೀಯ ಯೂತ್ ಪಾರ್ಲಿಮೆಂಟಿಗೆ ಶಿರಸಿಯ ಪ್ರಣವ್ ಭಾರದ್ವಾಜ್ ಆಯ್ಕೆ

  300x250 AD

  ಶಿರಸಿ :ಮಾನವ ರಚನಾ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ಪರ್ಯಾವರಣ ಸಂರಕ್ಷಣಾ ಗತಿವಿಧಿ ಸಂಸ್ಥೆಯು ನವೆಹಲಿಯ ‘ಪಾರ್ಲಿಮೆಂಟ್ ಭವನ’ದಲ್ಲಿ ಏ.16 ರಂದು “ರಾಷ್ಟ್ರೀಯ ಪರಿಸರ ಯುವ ಸಂಸತ್ – 2022” ಎಂಬ ಯೂತ್ ಪಾರ್ಲಿಮೆಂಟ್ ಸಂಘಟಿಸಿದ್ದು, ಇದರಲ್ಲಿ ಭಾಗವಹಿಸಲು ಶಿರಸಿಯ ಪ್ರಣವ್ ಭಾರದ್ವಾಜ್ ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತದಿಂದ ಹತ್ತು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಒಟ್ಟೂ 150 ವಿದ್ಯಾರ್ಥಿಗಳು ಈ ಯುವ ಸಂಸತ್‍ನಲ್ಲಿ ಪಾಲ್ಗೊಂಡು ವಿಷಯ ಮಂಡಿಸಿ ಚರ್ಚೆ ಮಾಡಲಿದ್ದಾರೆ.

  ಲೋಕಸಭಾದ್ಯಕ್ಷ ಶ್ರೀ. ಓಂ ಬಿರ್ಲಾ ಹಾಗೂ ಕೇಂದ್ರ ಸರಕಾರದ ಪರಿಸರ ಅರಣ್ಯ ಮಂತ್ರಿಗಳಾದ ಶ್ರೀ ಭೂಪೇಂದ್ರ ಯಾದವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ

  300x250 AD

  ಪ್ರಣವ್ ಭಾರದ್ವಾಜ್ ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದು, ಶಿರಸಿ ಲಯನ್ಸ್ ಶಾಲೆ, ಚೈತನ್ಯ ಪದವಿಪೂರ್ವ ಕಾಲೇಜು ಹಾಗೂ ಎಂ.ಇ.ಎಸ್ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾನೆ.
  ದೂರದರ್ಶನ ಸಂಸತ್ ವಾಹಿನಿಯಲ್ಲಿ ಇದರ ನೇರಪ್ರಸಾರವಾಗಲಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top