ಶಿರಸಿ:ಬೆಂಗಳೂರಿನ ಡಾ.ಗುರುರಾಜ ಕರ್ಜಗಿಯವರ ನೇತ್ರತ್ವದ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಇವರ ಸಹಕಾರದಲ್ಲಿ ಶಿಕ್ಷಕರಿಗೆ ವೃತ್ತಿ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಮೂರು ದಿನಗಳ ಸೃಜನ ಶೀಲ ಬೋಧನಾ ವಿಧಾನಗಳು, ರಾಷ್ಟ್ರೀಯ ಶಿಕ್ಷಣ ನೀತಿ 2020-21ನೇ ಶತಮಾನದ ಬೋಧನಾ ಕೌಶಲ್ಯಗಳ ಕುರಿತು ತರಬೇತಿ ಶಿಬಿರವನ್ನು ಏ.12 ರಿಂದ ಏ.14ರ ವರೆಗೆ ಶಿರಸಿ ಲಯನ್ಸ್ ಶಾಲೆಯ ಸಭಾಭವದಲ್ಲಿ ಶಿಕ್ಷಕರಿಗಾಗಿ ಆಯೋಜಿಸಲಾಗಿದೆ.
ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯು ಆಯೋಜಿಸಿರುವ ಈ ತರಬೇತಿ ಶಿಬಿರದಲ್ಲಿ ಶಿರಸಿಯ ಶಿಕ್ಷಣ ಸಂಸ್ಥೆ ಶಿರಸಿ ಲಯನ್ಸ್ ಶಾಲೆಯ ಎಲ್ಲಾ ಶಿಕ್ಷಕ ವೃಂದದ ಜೊತೆಗೆ ಶ್ರೀನಿಕೇತನ ಇಸಳೂರು ಮತ್ತು ಶಿರಸಿಯ ಎಂ.ಇ.ಎಸ್. ಶಾಲೆಯ ಶಿಕ್ಷಕರು ಕೂಡ ಪಾಲ್ಗೊಂಡಿದ್ದಾರೆ.
ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಲಯನ್ಸ್ ಸಭಾಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಲ. ಪ್ರೊ. ರವಿ ನಾಯಕ್, ಸದಸ್ಯರಾದ ಲಯನ್ ಕೆ.ಬಿ. ಲೋಕೇಶ್ ಹೆಗಡೆ , ಲಯನ್ ರಮಾ ಪಟವರ್ಧನ, ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ಸಬ್ ಕಮಿಟಿ ಚೇರ್ಮನ್ ಜಿ.ಎಸ್. ಭಟ್ಟ ಉಪ್ಪೋಣಿ ,ಹಾಗೂ ಸಂಪನ್ಮೂಲಗಳ ವ್ಯಕ್ತಿಗಳಾಗಿ ವಿವೇಕಾನಂದ ಜೆ.ನಿರ್ದೇಶಕರು (Director -training, academy for creative teaching Bangalore), ಶ್ರೀಮತಿ ಶೀಲು ರಾವ್ ನಿರ್ದೇಶಕರು ,( Dean-Academic Handholding, Academy for Creative Teaching, Bangalore.) ಶ್ರೀನಿಕೇತನ ಶಾಲೆಯ ಮುಖ್ಯೋಪಾಧ್ಯಾಯರಾದ ವಸಂತ ಭಟ್, ಲಯನ್ಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಾಂಕ ಹೆಗಡೆ ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು .
ಶ್ರೀಮತಿ ರೇಷ್ಮಾ ಮಿರಾಂಡಾ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಅನಿತಾ ಭಟ್ ವಂದಿಸಿದರು. ಶ್ರೀಮತಿ ದೀಪಾ ಶಶಾಂಕ್ ಹೆಗಡೆ ಇವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಮೂರು ದಿನಗಳ ಕಾಲ ನಡೆಯುವ ಈ ಕ್ರಿಯಾಶೀಲ ತರಬೇತಿ ಕಾರ್ಯಕ್ರಮದ ಪ್ರಯೋಜನವನ್ನು ಶಿಕ್ಷಕ ವೃಂದ ಪಡೆಯಬೇಕು ಎನ್ನುವುದು ಲಯನ್ಸ್ ಶಿಕ್ಷಣ ಸಂಸ್ಥೆಯ ಆಶಯವಾಗಿದೆ.