ಮುಂಡಗೋಡ: ಏತ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮೈಮೇಲೆ ಬೃಹತ್ ಪೈಪು ಬಿದ್ದು ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ತಾಲೂಕಿನ ಹನುಮಾಪುರದ ಹತ್ತಿರ ನಾಗನೂರ ರಸ್ತೆಯಲ್ಲಿ ನಡೆದಿದೆ.
ಬಿಹಾರ ರಾಜ್ಯದ ರಾಜು ಯಾದವ್ (38) ಎಂಬಾತನೇ ಮೃತಪಟ್ಟ ದುರ್ಧೈವಿ. ಕಳೆದ ಕೆಲ ತಿಂಗಳುಗಳಿಂದ ತಾಲೂಕಿನ ಕೆರೆ ನೀರು ತುಂಬಿಸುವ ಯೋಜನೆಯಾದ ಏತ ನೀರಾವರಿ ಯೋಜನೆ ಕಾಮಾಗಾರಿ ನಡೆಯುತ್ತಿದ್ದು, ಬಿಹಾರಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದು ಈಗಾಗಲೇ ಈ ತಂಡುವು ಶೇ.೯೦ರಷ್ಟು ಕಾಮಗಾರಿ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಮಂಗಳವಾರ ಮಧ್ಯಾಹ್ನದ ವೇಳೆ ಕಾಲುವೆಯಲ್ಲಿ ಕಾರ್ಮಿಕನು ಕೆಲಸದಲ್ಲಿ ಮಗ್ನನಾಗಿದ್ದನು ಈ ಸಮಯದಲ್ಲಿ ಆಕಸ್ಮಿಕವಾಗಿ ಬೃಹತ್ ಪೈಪ್ ಉರುಳಿ ಮೈಮೇಲೆ ಬಿದ್ದಿದೆ. ಇದರಿಂದ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಪಿಎಸ್‌ಐ ಬಸವರಾಜ್ ಮಬನೂರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.