ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಏ.13ರಿಂದ 17ರವರೆಗೆ ನಡೆಯಲಿರುವ ‘ನಮ್ಮ ಕುಮಟಾ ಹಬ್ಬ’ದಲ್ಲಿ ರಾಜ್ಯ ಮಟ್ಟದ ವಿವಿಧ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ‘ನಮ್ಮ ಕುಮಟಾ ಹಬ್ಬ’ದ ಅಧ್ಯಕ್ಷ ಸೂರಜ ನಾಯ್ಕ ಸೋನಿ ಹೇಳಿದರು.
ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಏ.13ರಂದು ಸಂಜೆ 7 ಘಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೊದಲ ದಿನ ಶಿರಸಿಯ ಟಿ.ಎಸ್.ಎಸ್ ಸಹಭಾಗಿತ್ವದಲ್ಲಿ ಡ್ಯಾನ್ಸ್ ಝಲಕ್ ಆಯೋಜಿಸಲಾಗಿದ್ದು, ಇದರಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರತಿದಿನ ನಮ್ಮ ತಾಲೂಕಿನ ನಿವೃತ್ತ ಸೈನಿಕರು ಮತ್ತು ಹಾಲಿ ಸೈನಿಕರನ್ನು ಮತ್ತು ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಮಾಡಲಾಗುತ್ತದೆ. 2ನೆಯ ದಿನ (ಏ.14) ಭಟ್ಕಳದ ಝೇಂಕಾರ್ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಕೆಜಿಎಫ್ ಸಿಂಗರ್ ಐರಾ ಆಚಾರ್ಯ, ಕನ್ನಡ ಕೋಗಿಲೆ ಖ್ಯಾತಿಯ ಖಾಸಿಂ ಅಲಿ, ಖ್ಯಾತ ಹಿನ್ನೆಲೆ ಗಾಯಕರಾದ ಸಂಚಿತ ಹೆಗ್ಡೆ, ನವೀನ ಸಜ್ಜು ತಮ್ಮ ಗಾಯನ ಪ್ರಸ್ತುತಗೊಳಿಸಲಿದ್ದಾರೆ ಎಂದರು.
ಪ್ರೇಮ ಪೂಜ್ಯಂ ಸಿನೆಮಾದ ಖ್ಯಾತ ನಟಿ, ನಮ್ಮೂರಿನವರಾದ ಬೃಂದಾ ಆಚಾರ್ಯ ಮತ್ತು ಇವರ ಮತ್ತೊಂದು ಸಿನೆಮಾದ ಜೂನಿಯರ್-2 ಚಿತ್ರ ತಂಡದವರು ನಮ್ಮ ಕುಮಟಾ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಜತೆಗೆ ಮಲ್ಲಗಂಬ, ಫೈರ್ ಡ್ಯಾನ್ಸ್, ಜಗ್ಲಿಂಗ್ ನಡೆಯಲಿದೆ. ಶನಿವಾರ ಝೇಂಕಾರ ಮೆಲೋಡಿಸ್‌ರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೂರು ಮತ್ತು ನಾಟಕ ತಂಡದವರಿಂದ ಹೊಸ ಪ್ರಯೋಗವಾದ ಮದುಮಗ ೩ ಎಂಬ ಸುಂದರ ನಾಟಕ ಪ್ರದರ್ಶನಗೊಳ್ಳಲಿದೆ. 16ರಂದು ರಾತ್ರಿ 9.30 ಘಂಟೆಗೆ ಪೆರ್ಡೂರ್ ಮೇಳದವರಿಂದ ‘ಕೃಷ್ಣ ಕಾದಂಬಿನಿ’ ಎಂಬ ಹೊಸ ಯಕ್ಷಗಾನ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
ಗೌರವಾಧ್ಯಕ್ಷ ರಾಮನಾಥ ಶಾನಭಾಗ (ಧೀರೂ), ಉಪಾಧ್ಯಕ್ಷ ಹೊನ್ನಪ್ಪ ನಾಯಕ, ಸದಸ್ಯರಾದ ಸುಬ್ಬಯ್ಯ ನಾಯ್ಕ, ನಾಗೇಶ ನಾಯಕ ಕಲಭಾಗ, ಗಜಾನನ ನಾಯ್ಕ, ಸುರ್ದಶನ ಶಾನಭಾಗ, ಸಂಪತಕುಮಾರ, ಗಣೇಶ ಭಟ್ಟ ಬಗ್ಗೋಣ, ಜಿ.ಕೆ.ಪಟಗಾರ, ಸಿ.ಜಿ.ಹೆಗಡೆ, ಕಮಲಾಕರ ನಾಯ್ಕ ಸೇರಿದಂತೆ ಮತ್ತಿತರರು ಇದ್ದರು.
ಇಂದು ಸಂಜೆ ಕಾರ್ಯಕ್ರಮದ ಉದ್ಘಾಟನೆ
13ರಂದು ಸಂಜೆ 7ಘಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪತ್ರಕರ್ತ ಗಂಗಾಧರ ಹಿರೇಗುತ್ತಿ ಉದ್ಘಾಟಿಸಲಿದ್ದಾರೆ. ಸ್ಟಾಲ್ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ಗಳನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದಾರೆ. ನಮ್ಮ ಕುಮಟಾ ಹಬ್ಬ ಸಮಿತಿಯ ಅಧ್ಯಕ್ಷ ಸೂರಜ ನಾಯ್ಕ ಸೋನಿ ಅಧ್ಯಕ್ಷತೆ ವಹಿಸಲಿದ್ದಾರೆ.
ನಮ್ಮ ಕುಮಟಾ ಹಬ್ಬ ಸಮಿತಿಯ ಗೌರವಾಧ್ಯಕ್ಷ ರಾಮನಾಥ ಶಾನಭಾಗ(ಧೀರೂ) ಮತ್ತು ಉಪಾಧ್ಯಕ್ಷ ಹೊನ್ನಪ್ಪ ನಾಯಕ, ಉಪಾಧ್ಯಕ್ಷ ಜಗದೀಶ ನಾಯಕ, ಸಂಚಾಲಕ ರವಿ ಶೆಟ್ಟಿ ಕವಲಕ್ಕಿ ಗೌರವ ಉಪಸ್ಥಿತರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಕ.ಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ, ಖ್ಯಾತ ವೈದ್ಯ ಡಾ.ಜಿ.ಜಿ.ಹೆಗಡೆ, ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ, ನಮ್ಮ ಕುಮಟಾ ಹಬ್ಬ ಸಮಿತಿಯ ಕಾರ್ಯದರ್ಶಿ ಸುದರ್ಶನ ಶಾನಭಾಗ, ಸಂಚಾಲಕ ಸಂಪತಕುಮಾರ, ಸದಸ್ಯ ಗಜಾನನ ನಾಯ್ಕ ಅಳ್ವೇಕೋಡಿ, ಸಂಚಾಲಕ ಶಿವರಾಮ ಹರಿಕಾಂತ, ಗುತ್ತಿಗೆದಾರ ಜಿ.ಎಸ್.ಗುನಗಾ, ನಿವೃತ್ತ ಆರ್.ಎಫ್.ಓ ಎಸ್.ಪಿ.ಮಡಿವಾಳ, ಪುರಸಭಾ ಸದಸ್ಯರಾದ ತುಳುಸು ಗೌಡ, ಕಿರಣ ಅಂಬಿಗ, ಇಸಾಕ್ ಶಮಾಲಿ, ಅನಿಲ ಹರ್ಮಲಕರ್ ಪಾಲ್ಗೊಳ್ಳಲಿದ್ದಾರೆ.