
ಶಿರಸಿ: ಲಯನ್ಸ್ ಕ್ಲಬ್ ನ ಡಿಸಿ ಫ಼ಾರ್ ಆರ್ಟ್ ಆಂಡ್ ಕಲ್ಚರ್ ವತಿಯಿಂದ ವಿಭಾಗ ಮಟ್ಟದಲ್ಲಿ ನಡೆದ ಆನ್ಲೈನ್ ನೃತ್ಯ ಸ್ಪರ್ಧೆಯಲ್ಲಿ ಶಿರಸಿಯ ಅನನ್ಯಾ ಅಶ್ವಥ್ ಹೆಗಡೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯದ 104 ಕ್ಲಬ್ ಗಳಿಂದ 22 ಸ್ಪರ್ಧಿಗಳು ಭಾಗವಹಿಸಿದ್ದರು. ಅವರಲ್ಲಿ ಅನನ್ಯಾ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ.
ಲಯನ್ಸ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಅನನ್ಯಾ ಶಿರಸಿಯ ಗೌರಿ ಫ಼್ಯುಯೆಲ್ಸ್ ಮಾಲೀಕರಾದ ಅಶ್ವಥ್ ಹೆಗಡೆ ಹಾಗೂ ಜ್ಯೋತಿಹೆಗಡೆ ದಂಪತಿಗಳ ಪುತ್ರಿಯಾಗಿದ್ದಾಳೆ.