ಶಿರಸಿ: ಜೀವನ ಶಿಕ್ಷಣ ಶಿಬಿರಗಳು ಸತ್ಪ್ರಜೆಯಾಗಿ ಬದುಕಲು ನೆರವಾಗುತ್ತದೆ ಎಂದು ಬೆಂಗಳೂರಿನ ಸ್ವರ್ಣವಲ್ಲೀ ಸೀಮಾ ಪರಿಷತ್ ಅಧ್ಯಕ್ಷ ಶಿವರಾಮ ಹೆಗಡೆ ಕಾಗೇರಿ ಹೇಳುದರು.
ಅವರು ಬೆಂಗಳೂರಿನಲ್ಲಿರುವ ಸ್ವರ್ಣವಲ್ಲೀಮಹಾ ಸಂಸ್ಥಾನದ ಅಭ್ಯುದಯದಲ್ಲಿ ಮಕ್ಕಳಿಗೆ ನಡೆಸುವ ಒಂಬತ್ತು ದಿನಗಳ ಜೀವನ ಶಿಕ್ಷಣ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಸ್ವರ್ಣವಲ್ಲೀ ಶ್ರೀಗಳ ಆಶಯದಂತೆ ವಿದ್ವಾಂಸರ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದೆ. ವೇದಾಧ್ಯಯನ, ಯೋಗಾಸನ, ಪ್ರಾಣಾಯಾಮ, ದೇವರ ಪೂಜೆ ಕಲಿಸಲಾಗುತ್ತದೆ ಎಂದರು.
ಶಿಬಿರ ಸಂಚಾಲಕ ಜಗನ್ನಾಥ ಹೇಮಾದ್ರಿ ಸ್ವಾಗತಿಸಿದರು.ಶಿಬಿರದ ಕುರಿತು ಶ್ರೀಪತಿ ಭಟ್ಟ ಮಂಜುಗುಣಿ ಮಾಹಿತಿ ನೀಡಿದರು. ಸೀಮಾ ಪರಿಷತ್ ಕಾರ್ಯಾಧ್ಯಕ್ಷ ಜಿ.ವಿ.ಹೆಗಡೆ ಹುಳಗೋಳ, ನರಸಿಂಹ ಹೆಗಡೆ ಅರೆಕಟ್ಟು ಇತರರು ಇದ್ದರು.