ಶಿರಸಿ: ಅಧ್ಯಯನ ಎಂದರೆ ಮೂಲ ಸಂಸ್ಕೃತದಲ್ಲಿ ವೇದಾಧ್ಯಯನ ಎಂದೇ ಅರ್ಥ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಅವರು ಸ್ವರ್ಣವಲ್ಲೀ ಮಠದಲ್ಲಿ ಆರಂಭಗೊಂಡ ೨೦ ದಿನಗಳ ಜೀವನ ಶಿಕ್ಷಣ ಶಿಬಿರಕ್ಕೆ ಚಾಲನೆ ನೀಡಿ ಆಶೀರ್ವಚನ ನುಡಿದರು.
ಇಲ್ಲಿ ಕುಳಿತು ಅಧ್ಯಯನ ಮಾಡಿದ ಸಂಗತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಶಿಬಿರದಲ್ಲಿ ವರ್ತನೆ, ನಡತೆ, ಬದುಕು ಹೇಗಿರಬೇಕು ವೇದದ ಅಧ್ಯಯನ, ಯೋಗ ಎಲ್ಲವೂ ಇರುತ್ತದೆ. ವೇದಾಧ್ಯಯನ ಎಂದರೆ ದೊಡ್ಡ ಸಮುದ್ರ. ಅದರ ಅರಿವು ಸ್ವಲ್ಪ ಆದರೂ ಇದ್ದರೆ ಬದುಕಿಗೆ ಮಾರ್ಗದರ್ಶನ ಆಗುತ್ತದೆ ಎಂದರು.
ಸರ್ವಜ್ಞೇಂದ್ರ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಭಟ್ಟ ಬಳ್ಳಿ, ಕಾರ್ಯದರ್ಶಿ ತ್ರಯಂಬಕ ಹೆಗಡೆ ಶೀಗೆಹಳ್ಳಿ. ಪಾಠಶಾಲೆಯ ಪ್ರಾಂಶುಪಾಲ ನರಸಿಂಹ ಭಟ್ಟ ಹಾಗೂ ಪಾಲಕರು ಶಿಬಿರಾರ್ಥಿಗಳು ಇದ್ದರು.