ಕುಮಟಾ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ 12 ಆರೋಪಿಗಳನ್ನು ಕುಮಟಾ ಪೋಲಿಸರು ಬಂಧಿಸಿದ್ದಾರೆ.
ತಾಲೂಕಿನ ಉಳ್ಳೂರುಮಠ ಮಾಸ್ತಿಮನೆ ದೇವಸ್ಥಾನದ ಬಳಿ ಅಕ್ರಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥಕಟ್ಟಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದಾಗ ಪೋಲಿಸರು ದಾಳಿ ನಡೆಸಿ, ನಗದು ಹಣ ₹10,460 ಹಾಗೂ ಜೂಜಾಟದ ಸಲಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರ ವಿರುದ್ಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.