ಕಾರವಾರ: ಸ್ವಚ್ಛ ಕಾರವಾರದ ಜನಜಾಗೃತಿ ಮೂಡಿಸುವ ಸಲುವಾಗಿ ಕಾರವಾರ ನಗರದಲ್ಲಿ “ನಮ್ಮ ಕಾರವಾರ ಸೈಕ್ಲೋಥಾನ್- 22” ಸೈಕಲ್ ರ‌್ಯಾಲಿ ನಡೆಯಿತು. ಎಂಟು ವರ್ಷದಿಂದ 70 ವರ್ಷದವರೆಗಿನ 150ಕ್ಕೂ ಅಧಿಕ ಜನ ಸೈಕ್ಲಿಂಗ್ ಮಾಡುವ ಮೂಲಕ ಕಾರವಾರ ಸುತ್ತಿ ಸ್ವಚ್ಛ ಕಾರವಾರದ ಜಾಗೃತಿ ಸಾರಿದರು.
ನಮ್ಮ ಕಾರವಾರ ತಂಡ ಹಾಗೂ ರೋಟರ್ಯಾಕ್ಟ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಈ ಸೈಕಲ್ ರ್ಯಾಲಿಯು ಕಾರವಾರದ ತೇಲಂಗ ರೋಡ್‌ನಿಂದ ಪ್ರಾರಂಭವಾಗಿ ಕಾಜುಬಾಗ, ಸವಿತಾ ಸರ್ಕಲ್, ಸುಭಾಷ ಸರ್ಕಲ್ ಮೂಲಕ ಸಾಗಿ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯ ಹಿಂಭಾಗದಲ್ಲಿ ಸಮಾಪ್ತಿಗೊಂಡಿತು. ನೂರಾರು ಜನರು ಸೈಕಲ್ ರ‌್ಯಾಲಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.