• Slide
    Slide
    Slide
    previous arrow
    next arrow
  • ಯಡಳ್ಳಿಯಲ್ಲಿ ಗಾನ ಸುಧೆ; ಭರತನಾಟ್ಯ

    300x250 AD

    ಶಿರಸಿ: ಯಡಳ್ಳಿಯ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ  ರಾಗಮಿತ್ರಾ ಪ್ರತಿಷ್ಠಾನ ,ಮಿತ್ರಾ ಮ್ಯೂಸಿಕಲ್ಸ್ ಆಶ್ರಯದಲ್ಲಿ ಭಕ್ತಿ ಸಂಗೀತ ಹಾಗೂ ಭರತನಾಟ್ಯದ ಸಾಂಸ್ಕ್ರತಿಕ ಸಂಭ್ರಮ‌ ಕಾರ್ಯಕ್ರಮವು ನಡೆಯಿತು. ವಿದ್ವಾನ್ ಪ್ರಕಾಶ್ ಹೆಗಡೆ ಯಡಳ್ಳಿ ಭಕ್ತಿ ಸಂಗೀತದ ಭಕ್ತಿ ಸುಧೆಯನ್ನು ಹರಿಸಿದರು. ವಿಜಯೇಂದ್ರ ಹೆಗಡೆ ಹಾಗೂ ಕುಮಾರ್ ಸನತ್ ರಾವ್ ತಬಲದಲ್ಲಿಯೂ, ಗೀತಾ ಜೋಶಿ ಹಾರ್ಮೊನಿಯದಲ್ಲಿಯೂ ಹಾಗೂ ಅನಂತಮೂರ್ತಿ ಹೆಗಡೆ ತಾಳದಲ್ಲಿ ಸಹಕಾರ ನೀಡಿದರು.

    ಬಳಿಕ ರಾಧಾರಾಣಿ ಮೈಸೂರು ಭರತನಾಟ್ಯವನ್ನು ಪ್ರಸ್ತುತ ಪಡಿಸಿ ಜನಮನವನ್ನು ಗೆದ್ದರು.  ಅವರ ಮಗಳಾದ 2 ವರ್ಷದ ಪುಟಾಣಿ ಕೃಪಾ ರಾಮನಾಗಿ ಅಭಿನಯಿಸಿದ್ದು ವಿಶೇಷವಾಗಿತ್ತು . ಕಾರ್ಯಕ್ರಮಕ್ಕೆ ನಾಗಪತಿ ಹೆಗಡೆ, ದತ್ತಾತ್ರೇಯ ಭಟ್ ಅತಿಥಿಗಳಾಗಿ ಪಾಲ್ಗೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಜಾನನ ಹೆಗಡೆ ಯಡಳ್ಳಿ ವಹಿಸಿಕೊಂಡಿದ್ದರು. ವಿ. ಪ್ರಕಾಶ್ ಹೆಗಡೆ ಯಡಳ್ಳಿ  ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top