ಸಿದ್ದಾಪುರ;ತಾಲೂಕಿನ ಹಾರ್ಸಿಕಟ್ಟಾ ಸಮೀಪದ ದೇವಾಸ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನವೋದಯ ನಾಟ್ಯ ಕಲಾ ಸಂಘ ದೇವಾಸ(ಹೊನ್ನೆಹದ್ದ) ಇವರಿಂದ ಕರ್ನಾಟಕ ರತ್ನ ಪುನಿತ್ ರಾಜಕುಮಾರ ಸ್ಮರಣಾರ್ಥ ಸೈನಿಕರಿಗೆ ಸನ್ಮಾನ ಹಾಗೂ ನಾಟಕ ಪ್ರದರ್ಶನ ಶನಿವಾರ ನಡೆಯಿತು.
ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲಾ ಮುಖ್ಯಾಧ್ಯಾಪಕ ರಾಜೇಂದ್ರ ಎ.ಕಾಂಬಳೆ ಕಾರ್ಯಕ್ರಮ ಉದ್ಘಾಟಿಸಿದರು. ದೇವಾಸ ಶಾಲಾ ಮುಖ್ಯ ಶಿಕ್ಷಕ ಡಿ.ಎಲ್.ಭಾಗ್ವತ್ ಅಧ್ಯಕ್ಷತೆವಹಿಸಿದ್ದರು.
ಮಾಜಿ ಸೈನಿಕ ರಾಮಚಂದ್ರ ಡಿ.ನಾಯ್ಕ ಮೆಣಸಿ, ಸೇವಾ ನಿರತ ಸೈನಿಕರಾದ ವಿನಾಯಕ ಎನ್.ನಾಯ್ಕ ದೇವಾಸ, ನಾಗರಾಜ ಎಂ.ನಾಯ್ಕ ಹಾರ್ಸಿಕಟ್ಟಾ, ದಿನೇಶ ಗಣಪತಿ ನಾಯ್ಕ ತರಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೊಡಚಾದ್ರಿ ಚಿಟ್ಸ್ ಬೆಂಗಳೂರಿನ ಹರೀಶ ಎಂ.ನಾಯ್ಕ ಸರ್ನಕೈ, ಅಜಿತ್ ಪಿ.ನಾಯ್ಕ ದೇವಾಸ ಬೆಂಗಳೂರು, ಕೆಡಿಸಿಸಿ ಬ್ಯಾಂಕ್ ಅಧಿಕಾರಿ ಪ್ರಕಾಶ ದೀಕ್ಷಿತ್ ಪಾತ್ಗಲ್,ನಿವೃತ್ತ ಶಿಕ್ಷಕ ಕೆ.ಟಿ.ನಾಯ್ಕ ಹೇರೂರು, ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ, ಇಂಜಿನಿಯರ್ ರವಿ ವಿ.ನಾಯ್ಕ ತೆಂಗಿನಮನೆ ಬೆಂಗಳೂರು, ವರ್ತಕ ಶ್ರೀಕಾಂತ ಶಾನಭಾಗ ಹಾರ್ಸಿಕಟ್ಟಾ, ನಾಟಕ ನಿರ್ದೇಶಕ ಎಂ.ಜಿ.ಹೆಗಡೆ ಹಾರ್ಸಿಮನೆ ಉಪಸ್ಥಿತರಿದ್ದರು.
ಗಣಪತಿ ವಿ.ನಾಯ್ಕ, ಜಯಂತ ನಾಯ್ಕ, ಶ್ರೀಪಾದ ನಾಯ್ಕ ಹಾಗೂ ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಸಕಿಪ್ರಾ ಶಾಲೆ ದೇವಾಸ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಪರಶುರಾಮ ಹ.ಬಣಗಾರ ವಿರಚಿತ ಮಿಮಿಕ್ರಿ ಕಲಾವಿದ ಎಂ.ಜಿ.ಹೆಗಡೆ ಹಾರ್ಸಿಮನೆ ನಿರ್ದೇಶನದ ‘ಅಣ್ಣನ ಅರಮನೆ ಅರ್ಥಾತ್ ಉತ್ತರ ಕನ್ನಡದ ಹುಲಿ’ ನಾಟಕ ಪ್ರದರ್ಶನಗೊಂಡಿತು.