ಸಿದ್ದಾಪುರ;ತಾಲೂಕು ಸರ್ಕಾರಿ ನೌಕರರ ಸಂಘದಿಂದ ನಿವೃತ್ತ ಹಾಗೂ ಸಾಧಕ ನೌಕರರಿಗೆ ಸನ್ಮಾನ ಮತ್ತು ಪ್ರತಿಭಾ ಪುಸ್ಕಾರ ಮತ್ತು ಸಂಘದ ವಾರ್ಷಿಕೋತ್ಸವ ಸರ್ಕಾರಿ ನೌಕರರ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ವಾರ್ಷಿಕೋತ್ಸವ ಉದ್ಘಾಟಿಸಿ ನಿವೃತ ಹಾಗೂ ಸಾಧಕ ನೌಕರರನ್ನು ಸನ್ಮಾನಿಸಿ ಮಾತನಾಡಿದ ತಹಸೀಲ್ದಾರ ಸಂತೋಷ ಭಂಡಾರಿ ಸರ್ಕಾರಿ ನೌಕರರು ಸಾರ್ವಜನಿಕರ ಅವರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಅಳವಡಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆವಹಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ ಮಾತನಾಡಿ ಸಂಘದ ಸಂಘಟನೆಯಲ್ಲಿ ಪ್ರತಿಯೊಬ್ಬರೂ ವಿಶ್ವಾಸ ಇಡಬೇಕು. ಸಂಘಟನೆಗೆ ಎಲ್ಲರ ನೈತಿಕ ಬೆಂಬಲ ಅಗತ್ಯ. ಸರ್ಕಾರ ಕೆಲಸವನ್ನು ದೇವರ ಕೆಲಸದಂತೆ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ನೌಕರರು ತಮ್ಮ ಕೆಲಸದೊಂದಿಗೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ತಾಪಂ ಸಿಇಓ ಪ್ರಶಾಂತರಾವ್, ಸಂಘದ ಗೌರವಾಧ್ಯಕ್ಷ ಪ್ರಶಾಂತ ಜಿ.ಎಸ್,ಪದಾಧಿಕಾರಿಗಳಾದ ಎನ್.ಐ.ಗೌಡ,ಯಶವಂತ ಅಪ್ಪಿನಬೈಲ್, ಸತೀಶ ಹೆಗಡೆ, ಜಿ.ಐ.ನಾಯ್ಕ ಇತರರಿದ್ದರು.
ಇದೇ ಸಂದರ್ಭದಲ್ಲಿ 3 ನಿವೃತ್ತ ನೌಕರರನ್ನು, 27ಸಾಧಕ ನೌಕರರಿಗೆ ಸನ್ಮಾನ ಹಾಗೂ 18 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪರಶುರಾಮ ನಾಯ್ಕ, ಉಷಾ ನಾಯ್ಕ, ಉದಯ ಶಿರಾಲಿ, ಎನ್.ಐ.ಗೌಡ ಕಾರ್ಯಕ್ರಮ ನಿರ್ವಹಿಸಿದರು.