ಸಿದ್ದಾಪುರ;ತಾಲೂಕಿನ ಮುಠ್ಠಳ್ಳಿ ಸಮೀಪದ ಹಳಿಯಾಳದ ಮಹಿಷಾಸುರ ಮರ್ಧಿನಿ ಗೆಳೆಯರ ಬಳಗ ಹಾಗೂ ಊರನಾಗರಿಕರ ಸಂಯುಕ್ತ ಆಶ್ರಯದಲ್ಲಿ ದಿ.ಬಂಗಾರ್ಯ ನಾಯ್ಕ ಪೂಜಾರರು,ಹಳಿಯಾಳ ಅವರ ಸ್ಮರಣಾರ್ಥ ಶನಿವಾರ ಹಳಿಯಾಳದಲ್ಲಿ ನಡೆದ 4ನೇ ವರ್ಷದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ತಂಡ ಪ್ರಥಮ ಹಾಗೂ ಮಂಗಳೂರು ತಂಡ ದ್ವಿತೀಯ ಸ್ಥಾನಪಡೆದುಕೊಂಡಿದೆ.
ಪಂದ್ಯಾವಳಿಯನ್ನು ಕೆಪಿಸಿಸಿ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ಉದ್ಘಾಟಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ, ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ, ಸದಸ್ಯರಾದ ಸರೋಜಾ ನಾಯ್ಕ, ಸಿದ್ದಾರ್ಥ ಗೌಡರ್ ಮುಠ್ಠಳ್ಳಿ, ಸೀತಾರಾಮ ಶೆಟ್ಟಿ, ಶಾಂತಕುಮಾರ್ ಗೌಡರ್, ಪತ್ರಕರ್ತ ನಾಗರಾಜ ಮತ್ತಿಗಾರ, ನಿವೃತ್ತ ಶಿಕ್ಷಕ ಕೆ.ಟಿ.ನಾಯ್ಕ ಹಳಿಯಾಳ,ಉದ್ಯಮಿ ಉಮಾಪತಿ ನಾಯ್ಕ ತೌಡತ್ತಿ, ಪರಮೇಶ್ವರ ನಾಯ್ಕ, ಆರ್.ಜಿ.ಭಟ್ಟ, ಮಹಿಷಾಸುರ ಮರ್ಧಿನಿ ದೇವಾಲಯದ ಅರ್ಚಕ ಎಂ.ಬಿ.ನಾಯ್ಕ, ಆರ್.ಬಿ.ಗೌಡ ಹೊಸ್ಕೊಪ್ಪ, ವಸಂತ ನಾಯ್ಕ ಹಳಿಯಾಳ,ಸುರೇಶ ನಾಯ್ಕ ತೆಂಗಿನಮನೆ,ಗೆಳೆಯರ ಬಳಗದ ಅಧ್ಯಕ್ಷ ಪೇಮಾನಂದ ನಾಯ್ಕ, ಕಾರ್ಯದರ್ಶಿ ವಿನಯಕುಮಾರ್ ಆರ್.ನಾಯ್ಕ ಹಾಗೂ ಸದಸ್ಯರಿದ್ದರು.
ಗಜಾನನ ನಾಯ್ಕ ಹಳಿಯಾಳ ಕಾರ್ಯಕ್ರಮ ನಿರ್ವಹಿಸಿದರು.ಪಂದ್ಯಾವಳಿಯಲ್ಲಿ ಒಟ್ಟೂ 12ತಂಡಗಳು ಪಾಲ್ಗೊಂಡಿದ್ದವು.
ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯ ಯಶಸ್ವಿ
