ಸಿದ್ದಾಪುರ;ತಾಲೂಕಿನ ಹೀನಗಾರ ಬಸ್ ನಿಲ್ದಾಣದ ಹತ್ತಿರ ಒಂದುವರೆ ವರ್ಷದ ಕಾಡುಕೋಣ ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಸ್ಥಳಕ್ಕೆ ಎಸಿಎಫ್ ಹರೀಶ, ಆರ್ ಎಫ್ಓ ಶಿವಾನಂದ ನಿಂಗಾಣಿ ಭೇಟಿ ನೀಡಿ ಪರಿಶೀಲಿಸಿದರು. ಹಾರ್ಸಿಕಟ್ಟಾ ಪಶುವೈದ್ಯಾಧಿಕಾರಿ ಡಾ.ಶ್ರೇಯಸ್ ಮರಣೋತ್ತರ ಪರೀಕ್ಷೆ ನಡೆಸಿದರು.ನಿಡಗೋಡ ಉಪವಲಯ ಅರಣ್ಯಾಧಿಕಾರಿ ವಿನಾಯಕ ಎಂ, ಅರಣ್ಯ ರಕ್ಷಕರಾದ ಹನುಮಂತ ಕಿಲಾರಿ, ಮಾರುತಿ ನಾಯ್ಕ ಹಾಗೂ ಸಿಬ್ಬಂದಿಗಳಿದ್ದರು. ಅರಣ್ಯ ಇಲಾಖೆಯ ಕಾನೂನಿನಂತೆ ಮುಂದಿನ ಕ್ರಮಕೈಗೊಳ್ಳಲಾಗಿದೆ.
ವಾಹನ ಡಿಕ್ಕಿ ಹೊಡೆದು ಕಾಡುಕೋಣ ಸಾವು
