ಶಿರಸಿ: ಶ್ರೀ ರಾಮನವಮಿಯ ಪ್ರಯುಕ್ತ ಸಾಂಸ್ಕೃತಿಕ ವೈಭವ ನಡೆಯಲಿದ್ದು, ಭಕ್ತಿ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮ ತಾಲೂಕಿನ ಯಡಳ್ಳಿಯ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಇಂದು ಏ.10 ರ ರಾತ್ರಿ 8 ರಿಂದ ನಡೆಯಲಿದೆ.
ಖ್ಯಾತ ಸಂಗೀತ ಕಲಾವಿದರಾದ ವಿದ್ವಾನ್ ಪ್ರಕಾಶ್ ಹೆಗಡೆ ಯಡಳ್ಳಿಯವರಿಂದ ಭಕ್ತಿ ಸಂಗೀತ, ಖ್ಯಾತ ಭರತನಾಟ್ಯ ಕಲಾವಿದೆ ಶ್ರೀಮತಿ ರಾಧಾ ರಾಣಿ ಭರತನಾಟ್ಯ ನಡೆಯಲಿದ್ದು ಇವರಿಗೆ ತಬಲಾ ಸಾಥಿಯಾಗಿ ವಿಜಯೆಂದ್ರ ಹೆಗಡೆ ಜೋಡಿಯಾಗಲಿದ್ದಾರೆ. ಆಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಂಘಟಕರು ಕೋರಿದ್ದಾರೆ.