ಶಿರಸಿ: ಇಲ್ಲಿನ ಎಸ್.ಆರ್.ಕಡವೆ ಅಭ್ಯುದಯ ಸಂಸ್ಥೆಯ ಸಹಯೋಗದಲ್ಲಿ ಡಾ. ರಾಮಚಂದ್ರ ಹೆಗಡೆ, ಭಂಡಿಮನೆ ಅವರ ‘ADDING HEALTHY YEARS BEYOND RETIREMENT‘ ಪುಸ್ತಕ ಬಿಡುಗಡೆ ಸಮಾರಂಭವು ಏ.9ರಂದು ಸಂಜೆ 4 ಗಂಟೆಗೆ ನಗರದ ಸಾಮ್ರಾಟ್ ಹೋಟೆಲ್‍ನ ವಿನಾಯಕ ಸಭಾಗ್ರಹದಲ್ಲಿ ನಡೆಯಲಿದೆ.
ಟಿಎಸ್‍ಎಸ್ ಕಾರ್ಯಾಧ್ಯಕ್ಷರು, ಟಿಆರ್‍ಸಿ ಅಧ್ಯಕ್ಷರು ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಅಧ್ಯಕ್ಷತೆ ವಹಿಸುವರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಹಿರಿಯ ಸಹಕಾರಿಗಳಾದ ಎನ್.ಎಸ್. ಹೆಗಡೆ, ಕುಂದರಗಿ ಪುಸ್ತಕ ಬಿಡುಗಡೆಗೊಳಿಸುವರು.
ಮುಖ್ಯ ಅತಿಥಿಗಳಾಗಿ ಪ್ರಕೃತಿ ಚಿಕಿತ್ಸಾ ಕೇಂದ್ರ, ಉರುಲಿಕಂಚನ, ಪುಣೆಯ ವ್ಯವಸ್ಥಾಪಕ ಟ್ರಸ್ಟಿಗಳು ಹಾಗೂ ಬೈಫ್ ಡೆವಲಪ್‍ಮೆಂಟ್ ರಿಸರ್ಚ್ ಫೌಂಡೇಶನ್, ಪುಣೆ ಇದರ ಮಾಜಿ ಅಧ್ಯಕ್ಷರಾದ ಡಾ|| ಎನ್. ಜಿ. ಹೆಗಡೆ, ಮಾದಪ್ಪನ್, ಕರ್ಕಿ ಉಪಸ್ಥಿತರಿರುವರು.
ಲೇಖಕರು ಪುಸ್ತಕವನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದು, ನಿವೃತ್ತಿ ಜೀವನದ ನಂತರÀದ ಜೀವನವನ್ನು ಕ್ರಿಯಾಶೀಲವಾಗಿ, ಅರ್ಥಪೂರ್ಣವಾಗಿ ಮತ್ತು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಪುಸ್ತಕದಲ್ಲಿ ತಿಳಿಸಿದ್ದಾರೆ. ಓದುಗರಿಗೆ ಹೊಸ ಚೈತನ್ಯ ಹಾಗೂ ಉತ್ಸಾಹವನ್ನು ಸೃಷ್ಟಿಸುವುದರೊಂದಿಗೆ ನಿವೃತ್ತಿ ನಂತರದಲ್ಲಿ ತಮ್ಮ ಜೀವನವನ್ನು ಹೇಗೆ ಪ್ರವೃತ್ತಗೊಳಿಸಬಹುದಾಗಿದೆ ಎಂಬ ಅಂಶಗಳನ್ನು ಪುಸ್ತಕವು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕವು ಖರೀದಿಗೆ ಲಭ್ಯವಿದ್ದು, ಲೇಖಕಕರು ಪುಸ್ತಕ ಮಾರಾಟದಿಂದ ಬಂದ ಸಂಪೂರ್ಣ ಲಾಭಾಂಶವನ್ನು ಶಿರಸಿಯಲ್ಲಿರುವ ಮಹದೇವ ಭಟ್, ಕೂರ್ಸೆ ಕಿವುಡು ಮಕ್ಕಳ ವಸತಿ ಶಾಲೆ ಮತ್ತು ಅಜೀತ ಮನೋಚೇತನ ಮಕ್ಕಳ ದಿನದ ಶಾಲೆಗೆ ನೀಡುವರೆಂದು ತಿಳಿಸಲಾಗಿದೆ.
ಏ.9 ಕ್ಕೆ ‘ರಾಮಚಂದ್ರ ಹೆಗಡೆ ಬಂಡಿಮನೆ’ಯವರ ಪುಸ್ತಕ ಬಿಡುಗಡೆ ಸಮಾರಂಭ
