• Slide
    Slide
    Slide
    previous arrow
    next arrow
  • ಅರಣ್ಯವಾಸಿ ಉಳಿವಿಗಾಗಿ ಹೊಸ ಅರಣ್ಯ ನೀತಿ ಜಾರಿಗೆ ಅಗ್ರಹ- ರವೀಂದ್ರ ನಾಯ್ಕ

    300x250 AD

    ಶಿರಸಿ: ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯ ಭೂಮಿ ಅವಲಂಭಿತವಾಗಿರುವ ಕುಟುಂಬಗಳ ಭೂಮಿ ಹಕ್ಕಿಗಾಗಿ ಕೇಂದ್ರ ಸರಕಾರವು ಅರಣ್ಯವಾಸಿಗಳ ಪರ ಹೊಸ ನೀತಿ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯವಾಸಿಗಳು ನಿರಾಶ್ರೀತರಾಗುವುದರಲ್ಲಿ ಸಂಶಯವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.


      ಅರಣ್ಯವಾಸಿಗಳ ಉಳಿಸಿ- ಜಾಥದ ಅಂಗವಾಗಿ ಸಾಲ್ಕಣಿ, ಅರೇ ಹುಲೇಕಲ್, ವಾನಳ್ಳಿ, ಕಕ್ಕಳ್ಳಿ, ಶಿರಪಾಲ್, ಕೋಡ್ನಗದ್ದೆ, ಧೂಳಳ್ಳಿ, ಸೋಂದಾ, ಕರ್ಕೋಳ್ಳಿ, ತೆಂಕಿನಬೈಲ್ ಮುಂತಾದ ಅರಣ್ಯ ಪ್ರದೇಶಗಳಲ್ಲಿ ದಿನಾಂಕ ಏಪ್ರೀಲ್ ೭ ಮತ್ತು ೮ ರಂದು ಜರುಗಿದ ಕಾರ್ಯಕ್ರಮದಲ್ಲಿ ಮೇಲಿನಂತೆ ಸರಕಾರಕ್ಕೆ ಅಗ್ರಹಿಸಿದರು.

    300x250 AD


       ಸುಮಾರು ಒಂದುಕೋಟಿ ಮಿಕ್ಕಿ ದೇಶದಲ್ಲಿ ಅರಣ್ಯವಾಸಿಗಳು ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿದ್ದು ಇಗಾಗಲೇ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿಗಳು ಕಾನೂನು ವ್ಯತಿರಿಕ್ತವಾಗಿ ತೀರಸ್ಕರಿಸಿರುವುದರಿಂದ ಕೇಂದ್ರ ಸರಕಾರವು ಅರಣ್ಯವಾಸಿಗಳ ಪರವಾಗಿ ನಿಲುವನ್ನು ಪ್ರಕಟಿಸದಿದ್ದಲ್ಲಿ ಅರಣ್ಯವಾಸಿಗಳು ಅತಂತ್ರವಾಗುವರೆAದು ಅವರು ಹೇಳಿದರು.
       ಸಭೆಯಲ್ಲಿ ಮಂಜುನಾಥ ಪೂಜಾರಿ, ಮಂಜು ನಾಯ್ಕ, ಶಂಕರ ಪೂಜಾರಿ, ಸುಬ್ಬಾ ಮುಂತಾದವರು ಉಪಸ್ಥಿತರಿದ್ದರು.
    ಅರಣ್ಯ ಹಕ್ಕು ಕಾಯಿದೆಗೆ ಗ್ರಹಣ:
      ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ೧೫ ವರ್ಷಗಳಾದರೂ ಮಂಜೂರಿ ಪ್ರಕ್ರೀಯೆಗೆ ಗ್ರಹಣ ಹಿಡಿದಂತಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top