ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ದೇವಾಸ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನವೋದಯ ನಾಟ್ಯ ಕಲಾ ಸಂಘ ದೇವಾಸ(ಹೊನ್ನೆಹದ್ದ) ಇವರಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ ಸ್ಮರಣಾರ್ಥ ಮಿಮಿಕ್ರಿ ಕಲಾವಿದ ಎಂ.ಜಿ.ಹೆಗಡೆ ಹಾರ್ಸಿಮನೆ ನಿರ್ದೇಶನದಲ್ಲಿ ‘ಅಣ್ಣನ ಅರಮನೆ ಅರ್ಥಾತ್ ಉತ್ತರ ಕನ್ನಡ ಹುಲಿ’ ಸಾಮಾಜಿಕ ನಾಟಕ ಏ.9ರಂದು ರಾತ್ರಿ 9ರಿಂದ ಪ್ರದರ್ಶನಗೊಳ್ಳಲಿದೆ.
ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರಾಜೇಂದ್ರ ಎ.ಕಾಂಬಳೆ ಕಾರ್ಯಕ್ರಮ ಉದ್ಘಾಟಿಸುವರು. ದೇವಾಸ ಶಾಲೆಯ ಮುಖ್ಯ ಶಿಕ್ಷಕ ಡಿ.ಎಲ್.ಭಾಗ್ವತ್ ಅಧ್ಯಕ್ಷತೆ ವಹಿಸುವರು. ಮಾಜಿ ಸೈನಿಕ ರಾಮಚಂದ್ರ ಡಿ.ನಾಯ್ಕ ಮೆಣಸಿ, ಸೇವಾ ನಿರತ ಸೈನಿಕರಾದ ವಿನಾಯಕ ಎನ್.ನಾಯ್ಕ ದೇವಾಸ, ನಾಗರಾಜ ಎಂ.ನಾಯ್ಕ ಹಾರ್ಸಿಕಟ್ಟಾ, ದಿನೇಶ ಗಣಪತಿ ನಾಯ್ಕ ತರಳಿ, ಕೊಡಚಾದ್ರಿ ಚಿಟ್ಸ್ ಬೆಂಗಳೂರಿನ ಹರೀಶ ಎಂ.ನಾಯ್ಕ ಸರ್ನಕೈ, ಅಜಿತ್ ಪಿ.ನಾಯ್ಕ ದೇವಾಸ,ಪ್ರಕಾಶ ದೀಕ್ಷಿತ್ ಪಾತ್ಗಲ್, ಕೆ.ಟಿ.ನಾಯ್ಕ ಹೇರೂರು, ದಿನೇಶ ಹೆಗಡೆ ಚಳ್ಳೆಹದ್ದ, ಅನಂತ ಶಾನಭಾಗ ಹಾರ್ಸಿಕಟ್ಟಾ, ಎಂ.ಜಿ.ಹೆಗಡೆ ಹಾರ್ಸಿಮನೆ ಉಪಸ್ಥಿತರಿರುತ್ತಾರೆ.
ನಂತರ ವೀರಭದ್ರೇಶ್ವರ ಡ್ರಾಮಾ ಸೆಟ್ ಮುಗದೂರು ಇವರ ಭವ್ಯ ರಂಗ ಸಜ್ಜಿಕೆಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.