• first
    second
    third
    previous arrow
    next arrow
  • ಭಟ್ಕಳ ಪುರಸಭೆ ಎದುರು ಮೀನು ಎಸೆದು ಪ್ರತಿಭಟಿಸಿದ ಮಹಿಳಾ ಮೀನುಗಾರರು

    300x250 AD

    ಭಟ್ಕಳ: ಪಟ್ಟಣದ ಪುರಸಭೆ ಹಳೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಮೀನು ಮಾರುಕಟ್ಟೆಯನ್ನು ಒಂದು ವಾರಗಳ ಕಾಲ ಸ್ವಚ್ಛಗೊಳಿಸದೇ ಇರುವುದನ್ನು ಖಂಡಿಸಿ, ಹೊಸ ಮೀನು ಮಾರುಕಟ್ಟೆಗೆ ಮೀನು ಮಾರಾಟ ಮಹಿಳೆಯರನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರಿಸುವ ಉದ್ದೇಶಕ್ಕೆ ವಿರೋಧಿಸಿ ಬುಧವಾರದಂದು ನೂರಾರು ಮಹಿಳಾ ಮೀನು ಮಾರಾಟಗಾರರು ತಾವು ತಂದ ಮೀನುಗಳನ್ನು ಪುರಸಭೆ ಮುಖ್ಯ ದ್ವಾರದ ಬಳಿ ಎಸೆದು ಪ್ರತಿಭಟನೆ ನಡೆಸಿದರು.

    ಎಂದಿನಂತೆ ಮೀನು ಮಾರುಕಟ್ಟೆಗೆ ಮಹಿಳಾ ಮೀನು ವ್ಯಾಪಾರಿಗಳು ಬಂದಿದ್ದು, ಈ ವೇಳೆ ಕಳೆದ 6 ದಿನಗಳಿಂದ ಮೀನು ಮಾರುವ ಮಹಿಳೆಯರು ಸ್ವತಃ ತಾವೇ ಹಣಕೊಟ್ಟು ಮೀನು ಮಾರುಕಟ್ಟೆ ಸ್ವಚ್ಚ ಮಾಡುತ್ತ ಬಂದಿದ್ದು, ಬುಧವಾರದಂದು ಬೆಳಿಗ್ಗೆ ಅವರು ಸ್ವಚ್ಛ ಮಾಡಿರುವ ಸ್ಥಳವನ್ನು ಮತ್ತೆ ಮೀನು ಹಾಗೂ ಕೋಳಿ ತ್ಯಾಜ್ಯವನ್ನು ತಂದು ಹಾಕಿ ಮಲೀನಗೊಳಿಸಲಾಗಿತ್ತು. ಇದರ ಹಿಂದೆ ಪುರಸಭೆಯ ಕೈವಾಡವಿದೆ ಎಂದು ಆರೋಪಿಸಿ ರೊಚ್ಚಿಗೆದ್ದ ಮಹಿಳೆಯರು ಪುರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ಕಳೆದ 40 ವರ್ಷಕ್ಕೂ ಮೀರಿ ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯಲ್ಲಿ ಮಹಿಳೆಯರು ಮೀನು ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಈಗ ಪುರಸಭೆ ಸಂತೆ ಮಾರುಕಟ್ಟೆಯಲ್ಲಿನ ಹೊಸ ಮೀನು ಮಾರುಕಟ್ಟೆಗೆ ನಮ್ಮನ್ನು ಅಲ್ಲಿಗೆ ಸ್ಥಳಾಂತರಿಸುವ ಹುನ್ನಾರವನ್ನು ಪದೇ ಪದೇ ಮಾಡುತ್ತಿದೆ.

    ಸ್ಥಳಾಂತರಗೊಂಡಲ್ಲಿ ನಮಗೆ ವ್ಯಾಪಾರ ನಡೆಸಲು ಆಗುವದಿಲ್ಲ. ಸದ್ಯ ಇಲ್ಲಿನ ಮೀನು ಮಾರುಕಟ್ಟೆಯನ್ನು ಸರಿಪಡಿಸಿಕೊಟ್ಟಲ್ಲಿ ಪುರಸಭೆಗೆ ಆದಾಯವಾಗಲಿದೆ ಆದರೆ ಪುರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳು ಒಂದಾಲ್ಲೊಂದು ರೀತಿಯಲ್ಲಿ ಮೀನು ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದು ಈಗ ಮತ್ತೆ ಸಾಬೀತಾಗಿದೆ ಎಂಬುದು ಮಹಿಳಾ ಮೀನು ವ್ಯಾಪಾರಸ್ಥರ ಆರೋಪವಾಗಿದೆ.

    300x250 AD

    ಪುರಸಭೆಯು ಮೀನು ವ್ಯಾಪಾರಿಗಳನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರಿಸುವ ಉದ್ದೇಶದ ಹಿನ್ನೆಲೆ ಹಳೆಯ ಮೀನು ಮಾರುಕಟ್ಟೆಯನ್ನು ಒಂದು ವಾರದ ಕಾಲ ಸ್ವಚ್ಚಗೊಳಿಸದೇ ಇರುವುದು ಹಾಗೂ ನಾವು ಸ್ವಚ್ಛಗೊಳಿಸಿದ ತ್ಯಾಜ್ಯ ಕಸವನ್ನು ಮತ್ತೆ ಮಾರುಕಟ್ಟೆಯೊಳಗೆ ಹಾಕಿದ್ದಾರೆಂದು ಆರೋಪಿಸಿ ಮಹಿಳೆಯರು ಮೀನು ಮಾರುಕಟ್ಟೆಯಿಂದ ತಮ್ಮನ್ನು ಸ್ಥಳಾಂತರಿಸುವ ಸಲುವಾಗಿ ಕಳೆದ ಒಂದು ವಾರದಿಂದ ಸ್ವಚ್ಚತೆ ಮಾಡದೇ ಮೀನು ಮಾರುವ ಮಹಿಳೆಯರು ಅಲ್ಲಿ ಕುಳಿತುಕೊಳ್ಳದಂತೆ ಮಾಡಿದ್ದಾರೆ ಎಂದು ಪುರಸಭೆಯ ಅಧಿಕಾರಿಗಳಿಗೆ ಮೀನು ಮಾರುಕಟ್ಟೆ ಸ್ವಚ್ಚ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

    ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಬೆಳ್ಳಿಯಪ್ಪ ಮೀನುಗಾರರನ್ನು ಸಮಾಧಾನಪಡಿಸಿದರು. ಅನಂತರ ಸ್ಥಳದಲ್ಲಿದ್ದ ಮಹಿಳಾ ಮೀನು ವ್ಯಾಪಾರಿಗಳು ಪ್ರತಿಭಟನೆ ನಿಲ್ಲಿಸಿ ವ್ಯಾಪಾರಕ್ಕೆ ತೆರಳಿದರು. ನಂತರ ಅರ್ಧ ಘಂಟೆಯಲ್ಲಿ ಪುರಸಭೆ ಪ್ರಭಾರ ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕಿ ಮೀನು ಮಾರುಕಟ್ಟೆಗೆ ತೆರಳಿ ಸಿಬ್ಬಂದಿಯಿಂದ ಮೀನು ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿದರು.

    Share This
    300x250 AD
    300x250 AD
    300x250 AD
    Back to top