ಶಿರಸಿ: ಅರಣ್ಯವಾಸಿಗಳಿಗೆ ಜಾಗೃತ ಮೂಡಿಸುವ ಮತ್ತು ಸರಕಾರದ ಮೇಲೆ ಹೆಚ್ಚಿನ ಒತ್ತಡ ತರುವ ಉದ್ದೇಶದಿಂದ ಜಿಲ್ಲಾದ್ಯಂತ ಹಮ್ಮಿಕೊಂಡ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ 300 ನೇಯ ಗ್ರಾಮ ಭೇಟಿ ಕಾರ್ಯಕ್ರಮ ಏ.11 ರಂದು ಶಿರಸಿ ತಾಲೂಕಿನ, ಹುಲೇಕಲ್‌ದಲ್ಲಿ, ಬೆಳಿಗ್ಗೆ 10 ಗಂಟೆಗೆ ಅರಣ್ಯ ವಾಸಿಗಳನ್ನ ಉಳಿಸಿ- ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೇ. 28 ರಂದು ಕುಮಟ ತಾಲೂಕಿನಿಂದ ಪ್ರಾರಂಭವಾದ ಅರಣ್ಯವಾಸಿಗಳನ್ನ ಉಳಿಸಿ- ಜಾಥ ಜಿಲ್ಲಾದ್ಯಂತ ಸುಮಾರು 2,500 ಕೀ.ಮೀ ಸಂಚರಿಸಿ 300 ನೇ ಗ್ರಾಮ ಭೇಟಿ ಕಾರ್ಯಕ್ರಮ ಸೋಮವಾರ, 11 ಕ್ಕೆ ಹುಲೇಕಲ್ಲಿನಲ್ಲಿ ಜರುಗಲಿದೆ ಎಂದು ಅವರು ತಿಳಿಸಿದರು.
ಹೋರಾಟದ ವಾಹಿನಿ ಮೂಲಕ ಈಗಾಗಲೇ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಯಲ್ಲಾಪುರ, ಮುಂಡಗೋಡ ತಾಲೂಕಿನಲ್ಲಿ ಅರಣ್ಯವಾಸಿಗಳ ಪ್ರಧೇಶಕ್ಕೆ ಭೇಟಿ ನೀಡಿ ಕಾನೂನು ಮಾಹಿತಿ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಹಾಗೂ ಮೂಲಭೂತ ಹಕ್ಕು ಮಂಜೂರಿಗೆ ಸಂಬಂಧಿಸಿ ಕಾನೂನಾತ್ಮಕ ಅಂಶಗಳ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಆಸಕ್ತ ಅರಣ್ಯವಾಸಿಗಳು ದಿ. 11 ರಂದು ಹುಲೇಕಲ್‌ದಲ್ಲಿ ಜರುಗುವ ಅರಣ್ಯವಾಸಿಗಳನ್ನ ಉಳಿಸಿ- ಜಾಥಕ್ಕೆ ಆಗಮಿಸಲು ಕೋರಿದ್ದಾರೆ.