ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಯಕ್ಷಗಾನ ಕವಿ, ವಿದ್ವಾಂಸ ಪ್ರೊ.ಎಂ.ಹೆಗಡೆ ದಂಟ್ಕಲ್ (ಜೋಗಿನ್ಮನೆ) ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಏ.8ರಂದು ಸಂಜೆ 5 ರಿಂದ ಸೀತಾ ವಿಯೋಗ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಗಜಾನನ ಬೋಳ್ಗೆರೆ,ಗಜಾನನ ಕೋಣಾರೆ ಸಹಕರಿಸುವರು. ಅರ್ಥಧಾರಿಗಳಾಗಿ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ, ದಿವಾಕರ ಹೆಗಡೆ ಕೆರೆಹೊಂಡ, ಲಕ್ಷ್ಮೀಕಾಂತ ಹೆಗಡೆ ಕೊಂಡದಕುಳಿ,ನಾರಾಯಣ ಹೆಗಡೆ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಏ.8ಕ್ಕೆ ಹೆಗ್ಗರಣಿಯಲ್ಲಿ ‘ಸೀತಾ ವಿಯೋಗ’ ತಾಳಮದ್ದಳೆ
