ಶಿರಸಿ: ತಾಲೂಕಿನ ಕೊಳಗಿಬೀಸ್ ನ ಶ್ರೀ ಮಾರುತಿ ದೇವಸ್ಥಾನದಲ್ಲಿ ಏ.13 ರಿಂದ ಮೇ 3 ರವರೆಗೆ ಇಪ್ಪತ್ತು ದಿನಗಳ ಕಾಲ ವೇದ ಶಿಬಿರ ನಡೆಯಲಿದೆ.
ಉಪನೀತರಾದ ಎಲ್ಲ ವಟುಗಳು ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ನುರಿತ ವೈಧಿಕರು ಪಾಠ ಮಾಡಲಿದ್ದಾರೆ. ಶಿಬಿರಾರ್ಥಿಗಳಿಗೆ ಮಧ್ಯಾಹ್ನ ಬೋಜನ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದ್ದು ಕಳೆದ 23 ವರ್ಷಗಳಿಂದ ವೇದ ಶಿಬಿರ ನಡೆಸಿಕೊಂಡು ಬರಲಾಗುತ್ತಿದೆ.
ಬೆಳಿಗ್ಗೆ 9 ರಿಂದ ಸಂಜೆ 4.30 ರವರೆಗೆ ದಿನಂಪ್ರತಿ ನಡೆಯುವ ಈ ಶಿಬಿರದಲ್ಲಿ ಸಂಧ್ಯಾವಂದನೆ, ಪೂಜಿತ ಮುಂತಾದ ಪಠಣದ ಮಾರ್ಗದರ್ಶನ ಮಾಡಲಾಗುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ಹೆಸರು ನೊಂದಾಯಿಸಲು 9663912101 ಅಥವಾ ಶ್ರೀ ದೇವಸ್ಥಾನದ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.