ಯಲ್ಲಾಪುರ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪಕ್ಷದ ಸಂಸ್ಥಾಪನಾ ದಿನ ಆಚರಿಸಲಾಯಿತು.
ಪಕ್ಷವನ್ನು ಕಟ್ಟಿ ಬೆಳೆಸಿದ ಮಹಾತ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅವರ ಕಾರ್ಯಸಾಧನೆಯನ್ನು ನೆನಪಿಸಿಕೊಳ್ಳಲಾಯಿತು.
ಪಕ್ಷದ ತಾಲೂಕಾ ಅಧ್ಯಕ್ಷ ಜಿ.ಎನ್.ಗಾಂವ್ಕರ, ಪುತ್ತೂರು ಮಂಡಲಾಧ್ಯಕ್ಷ ಜಗನ್ನಾಥ, ಪ್ರಮುಖರಾದ ಉಮೇಶ ಭಾಗ್ವತ್, ರಾಮು ನಾಯ್ಕ, ಶ್ರೀನಿವಾಸ ಗಾಂವ್ಕರ, ಅಮಿತ್ ಅಂಗಡಿ, ರಜನಿ ಚಂದ್ರಶೇಖರ ಮುಂತಾದವರು ಇದ್ದರು.
ಯಲ್ಲಾಪುರದಲ್ಲಿ BJP ಸಂಸ್ಥಾಪನಾ ದಿನಾಚರಣೆ
