• Slide
    Slide
    Slide
    previous arrow
    next arrow
  • ಮುಂಡಗೋಡದಲ್ಲಿ ಅರಣ್ಯವಾಸಿಗಳನ್ನ ಉಳಿಸಿ ಬೃಹತ್ ಜಾಥಾ; ಅರಣ್ಯ ಭೂಮಿ ಹಕ್ಕೋತ್ತಾಯಕ್ಕೆ ಅಗ್ರಹ

    300x250 AD

    ಮುಂಡಗೋಡ: ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕ ಜಾಗೃತ ಮೂಡಿಸುವ ಹಾಗೂ ಸರಕಾರ ಅರಣ್ಯವಾಸಿ ಸಮಸ್ಯೆಗೆ ಸ್ಫಂದಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನ ಉಳಿಸಿ- ಜಾಥಕ್ಕೆ ಮುಂಡಗೋಡ ತಾಲೂಕಿನಾದ್ಯಂತ ಬೃಹತ್ ಸಂಖ್ಯೆಯ ಅರಣ್ಯವಾಸಿಗಳು ವಾದ್ಯ, ಪಟಾಕಿ ಹಾಗೂ ಜಯಘೋಷಣೆಯೊಂದಿಗೆ ಉತ್ಸಾಹದಿಂದ ಪಾಲ್ಗೊಳ್ಳುವಿಕೆಯಿಂದ ಸರಕಾರ ಗಮನ ಸೆಳೆಯಲು ಯಶಸ್ವಿಯಾಗುವುದಲ್ಲದೇ ಯಶಸ್ವಿ ಜಾಥ ಜರುಗಿತು.

    ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಸೋಮವಾರ ಮುಂಡಗೋಡ ತಾಲೂಕಿನ ಪ್ರವಾಸಿ ಮಂದಿರದ ಆವರಣದಿಂದ ಪ್ರಾರಂಭವಾದ ಜಾಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

    ರಾಜ್ಯ ಮಟ್ಟದ ಕಾರ್ಯಕ್ರಮದ ಅಂಗವಾಗಿ ಪ್ರಥಮ ಹಂತದಲ್ಲ ಜಿಲ್ಲೆಯಲ್ಲಿ ಹತ್ತುಸಾವಿರ ಕೀ.ಮೀ ಸಂಚರಿಸುವ ಹೋರಾಟ ವಾಹಿನಿ 500 ಹಳ್ಳಿಗಳಿಗೆ 30 ದಿನಗಳಲ್ಲಿ ತಿರುಗಾಟಮಾಡಲಿದ್ದು, ಅರಣ್ಯವಾಸಿಗಳ ಹಳ್ಳಿಗಳಲ್ಲಿ ಹೋರಾಟ ವಾಹಿನಿ ಮೂಲಕ ಕಾನೂನು ಜಾಗೃತೆ ಮೂಡಿಸುವ ಕಾರ್ಯಕ್ರಮವು ಇಂದು ಮುಂಡಗೋಡ ತಾಲೂಕಿನಲ್ಲಿ ಜರುಗಿದವು.

    ಕಾರ್ಯಕ್ರಮದಲ್ಲಿ ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ, ಶೇಖಯ್ಯ ಹಿರೇಮಠ, ಶಬ್ಬೀರ್ ಚಪಾತಿ, ವೀರಭದ್ರಯ್ಯ, ಮಲ್ಲಿಕಾರ್ಜುನ ಓಣಿಕೇರಿ, ಬಾಬಾಜಾನ್, ಮಹೇಶ ಗಣೇಶಗುಡಿ, ಪ್ರಶಾಂತ್ ಜೇನ್, ಮಲ್ಲೇಶಪ್ಪ ನೀಲಪ್ಪ ಚಂಗಾಪುರ, ಶಾತಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

    300x250 AD

    ಹೋರಾಟ ವಾಹಿನಿ ಆಕರ್ಷಣೆ:
    ತಾಲೂಕಿನಾದ್ಯಂತ ಬಂದಂತಹ ಅರಣ್ಯವಾಸಿಗಳು ಜಾಥದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ವಿಶೇಷ ವಿನ್ಯಾಸದಿಂದ ರೂಪಿತಗೊಂಡ “ಹೋರಾಟದ ವಾಹಿನಿ” ಜಾಥದ ವಿಶೇಷ ಆಕರ್ಷಣೆ ಆಗಿದ್ದು, ವಾಹಿನಿಯ ಮೇಲೆ ಅರಣ್ಯವಾಸಿಗಳು ಹೋರಾಟದ ಭಾವುಟ ಹಿಡಿದು ಉತ್ಸಾಹದಿಂದ ಮೆರವಣಿಗೆಯಲ್ಲಿ ಸಾಗಿರುವುದು ಸಾರ್ವಜನಿಕರ ಗಮನ ಸೆಳೆಯಿತು.

    ತೀವ್ರ ಆಕ್ರೋಶ:
    ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗಾಗಿ ಸರಕಾರ ನಿರ್ಲಕ್ಷಿಸುವ ಧೋರಣೆ ವಿರುದ್ಧ ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಹಕ್ಕೋತ್ತಾಯ:
    ಅರಣ್ಯ ಭೂಮಿ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತಹ ಅರ್ಜಿಗಳು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ತೀರಸ್ಕಾರವಾಗಿದ್ದು ಸರಕಾರವು ಅರಣ್ಯವಾಸಿಗಳ ಪರವಾಗಿ ನಿಲುವನ್ನು ಪ್ರಕಟಿಸಬೇಕು. ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸದಂತೆ ಹಕ್ಕುಗಳನ್ನು ನೀಡಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸಭೆಯನ್ನು ಉದ್ದೇಶಿಸಿ ಸರಕಾರಕ್ಕೆ ಅಗ್ರಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top