
ಶಿರಸಿ: ಜಿಲ್ಲೆಯಲ್ಲಿ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಜು.21 ಕ್ಕೆ ಒಟ್ಟೂ 8400 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ ಎಂದು ತಿಳಿಸಿದೆ.
ನಾಳೆ ಶಿರಸಿ ತಾಲೂಕಿನಲ್ಲಿ ಒಟ್ಟೂ 1000 ವ್ಯಾಕ್ಸಿನ್ ಲಭ್ಯವಿದ್ದು, 2ನೇ ಡೋಸ್ ನವರಿಗೆ ಮಾತ್ರ ನೀಡಲಾಗುತ್ತಿದ್ದು, ಅದನ್ನು ಬಿ.ಆರ್ ಅಂಬೇಡ್ಕರ್ ಭವನದಲ್ಲಿ 500, ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ 500 ವ್ಯಾಕ್ಸಿನ್ ನೀಡಲಾಗುತ್ತದೆ. ಇನ್ನುಳಿದಂತೆ ಅಂಕೋಲಾದಲ್ಲಿ 600, ಭಟ್ಕಳ 800, ಹಳಿಯಾಳ 300, ಹೊನ್ನಾವರ 800, ಜೋಯ್ಡಾ 300, ಕಾರವಾರ 800, ಮುಂಡಗೋಡ 600, ಕುಮಟಾ 800, ಸಿದ್ದಾಪುರ 600, ಯಲ್ಲಾಪುರ 600, ದಾಂಡೇಲಿ 300, ಡಿಬಿಎಸ್ 700, ಡಿಚ್ ನಲ್ಲಿ 200 ವ್ಯಾಕ್ಸಿನ್ ಲಭ್ಯವಿದೆ ಎಂದು ಮಾಹಿತಿ ನೀಡಿದೆ.