ಕಾರವಾರ: ಉತ್ತರಕನ್ನಡ ಜಿಲ್ಲೆ ಕಾರವಾರ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ” ಪೊಲೀಸ್ ಧ್ವಜ” ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಸಹಾಯಕ ಪೊಲೀಸ್ ನಿರೀಕ್ಷಕ ವಿನಾಯಕ ವಾಮನ್ ನಾಯ್ಕ ಮಾತನಾಡಿ, ಪೊಲೀಸ್ ಇಲಾಖೆಯ ಪ್ರಾಮುಖ್ಯತೆ ಮತ್ತು ಸಿಬ್ಬಂದಿಗಳ ಕುಂದು ಕೊರತೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪರೇಡ್ ಪರಿವೀಕ್ಷಣೆ, ಆಕರ್ಷಕ ಪಥಸಂಚಲನ, ರಿವ್ಯೂ ಆರ್ಡರ್, ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜಕ್ಕೆ ಗೌರವ ನೀಡಲಾಯಿತು. ಪೊಲೀಸ್ ಅಧಿಕ್ಷಕಿ ಡಾ. ಸುಮನ್ ಪೆನ್ನೇಕರ್, ಅಪರ ಪೊಲೀಸ್ ಅಧೀಕ್ಷಕ ಬದ್ರಿನಾಥ್ ಎಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.